‘ಭಿನ್ನಮತ’ ವಲ್ಲ ಎಂದ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿಯಿಂದ ಶೋಕಾಸ್ ನೊಟೀಸ್
ಬೆಂಗಳೂರು: ನಾವ್ ಭಿನ್ನಮತೀಯರಲ್ಲ, ನಾವೆಲ್ಲರೂ ನಿಷ್ಠಾವಂತ ಬಿಜೆಪಿಗರು, ವಿಜಯೇಂದ್ರ ಬಣವನ್ನೇ ಬೇಕಾದ್ರೆ ಭಿನ್ನಮತೀಯರು ಎಂದು ಕರೆಯಬಹುದು ಎಂದು ಹೇಳಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿ ನೊಟೀಸ್ ನೀಡುವ ಮೂಲಕ ಶಾಕ್ ನೀಡಿದೆ.
ಯತ್ನಾಳ್ ಬಣ ಬೆಳೆಯುತ್ತಲೇ ಹೋಗುತ್ತಿದೆ ಎಂಬ ಮಾತು ಇತ್ತೀಚಿನ ಬೆಳವಣಿಗೆಯಿಂದ ಕೇಳಿಬಂದಿತ್ತು. ಕೇಂದ್ರ ಸಚಿವ ವಿ. ಸೋಮಣ್ಣ ನಿವಾಸದ ಪೂಜೆಯ ವೇಳೆ ಭಿನ್ನರ ಗುಂಪು ಸೇರಿಕೊಂಡಿದ್ದು, ಅಧಿಕೃತ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಆಹ್ವಾನವೇ ಇಲ್ಲದ್ದು, ಕುತೂಹಲ ಮೂಡಿಸಿತ್ತು. ಈ ವೇಳೆ ಯತ್ನಾಳ್ ಮತ್ತು ಟೀಂ ನ ಕಾನ್ಫಿಡೆನ್ಸ್ ಲೆವೆಲ್ ನೋಡಿದರೆ, ಏನೋ ಹೊಸತು ನಡೆಯಲಿದೆ ಎಂಬ ನಿರೀಕ್ಷೆ ಮಾಡಲಾಗಿತ್ತು.
ಆದರೆ, ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರ ಓಲೈಕೆಯಲ್ಲಿ ತೊಡಗಿದ್ದರು ಸಂಜೆ ವೇಳೆಗೆ ಯತ್ನಾಳ್ ಗೆ ಶೋಕಾಸ್ ನೊಟೀಸ್ ರವಾನೆಯಾಗಿದ್ದು, ವಿಜಯೇಂದ್ರ ಬಡಪಟ್ಟಿಗೆ ಬಗ್ಗುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ. ಈಗ ಭಿನ್ನರಾರು ಎಂಬ ಪ್ರಶ್ನೆ ಮತ್ತೊಂದು ಸುತ್ತಿನ ಸದ್ದು ಪಡೆದಿದೆ.
ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಸೇರಿ ಅನೇಕರು ಭಿನ್ನರ ಜತೆಗೆ ನಿಂತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇಷ್ಟಾದರೂ ಯತ್ನಾಳ್ ಗೆ ಶೋಕಾಸ್ ನೊಟೀಸ್ ಬರಲು ಕಾರಣವೇನು? ಎಂಬುದೀಗ ಕುತೂಹಲ ಮೂಡಿಸಿರುವ ಸಂಗತಿಯಾಗಿದೆ.


