ಬೆಂಗಳೂರು: ಜ್ವರಕ್ಕೆ ಇಂಜೆಕ್ಷನ್ ಪಡೆದ ಯುವಕನೊಬ್ಬ ಕ್ಷಣಾರ್ಧದಲ್ಲಿ ಪ್ರಜ್ಞೆ ತಪ್ಪಿದ್ದು, ನಂತರ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವಕನನ್ನು 23 ವರ್ಷದ ನಾಗೇಂದ್ರ ಎಂದು ಹೇಳಲಾಗಿದೆ. ಸನ್ ಸೈನ್ ಕ್ಲಿನಿಕ್ ವೈದ್ಯರ ವಿರುದ್ದ ದೂರು ನೀಡಿರುವ ಕುಟುಂಬಸ್ಥರು ಯುವಕನ ಸಾವಿಗೆ ನ್ಯಾಯ ನೀಡುವಂತೆ ಒತ್ತಾಯಿಸಿದ್ದಾರೆ.
ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ, ಯುವಕ ನಾಗೇಂದ್ರ ಆಸ್ಪತ್ರೆಗೆ ಬಂದಿದ್ದ. ವೈದ್ಯರು ಇಂಜೆಕ್ಷನ್ ಕೊಟ್ಟಿದ್ದರು. ಇಂಜೆಕ್ಷನ್ ಕೊಟ್ಟ ನಿಮಿಷದಲ್ಲಿ ಯುವಕ ಪ್ರಜ್ಞೆ ತಪ್ಪಿಬಿದ್ದ, ಉಸಿರುಗಟ್ಟಿ ಪ್ರಾಣ ಬಿಟ್ಟ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.