ರಾಜಕೀಯ ಸುದ್ದಿ

ಗೃಹಲಕ್ಷ್ಮೀ ಯೋಜನೆ ‘ಚುನಾವಣಾ ಲಕ್ಷ್ಮೀ’ ಯೋಜನೆಯಾಗಿದೆ: ಸರಕಾರದ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ

Share It

ಬೆಂಗಳೂರು: ಬಾಗ್ಯಲಕ್ಷ್ಮೀ ಯೋಜನೆ ಚುನಾವಣೆ ಲಕ್ಷ್ಮೀ ಯೋಜನೆಯಾಗಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಭಾಗ್ಯಲಕ್ಷ್ಮೀ ಯೋಜನೆಯ ಹಣ ಮೂರು ತಿಂಗಳಿಂದ ಬಿಡುಗಡೆಯಾಗಿಲ್ಲ, ಸಂಬಂಧಪಟ್ಟ ಮಂತ್ರಿಗಳು ನನಗೆ ಉಷಾರಿಲ್ಲದ್ದಕ್ಕೆ ತಡವಾಗಿದೆ ಎನ್ನುತ್ತಾರೆ. ಮುಖ್ಯಮಂತ್ರಿ ಅವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ ಎಂದು ಗುಡುಗಿದರು.

ಭಾಗ್ಯಲಕ್ಷ್ಮೀ ಯೋಜನೆ ಹಣ ಚುನಾವಣೆ ಸಂದರ್ಭದಲ್ಲಿ ಗೆಲುವಿಗೆ ಘೋಷಣೆಯಷ್ಟೇ ಆಗಿತ್ತು. ಅನಂತರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದರು. ಈಗ ಮೂರು ತಿಂಗಳಿಂದ ಬಿಡುಗಡೆಯಾಗಿಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ವೇಳೆಗೆ ಹಣ ಬಿಡುಗಡೆ ಮಾಡಲು ಸರಕಾರ ಮುಂದಾಗಿದೆ. ಆ ಮೂಲಕ ಭಾಗ್ಯಲಕ್ಷ್ಮೀ ಯೋಜನೆ ಚುನಾವಣೆ ಲಕ್ಷ್ಮೀ ಯೋಜನೆಯಾಗಿದೆ ಎಂದು ಆರೋಪಿಸಿದರು.

updating…


Share It

You cannot copy content of this page