ಕಲಘಟಗಿ: ನಟ ದಿ. ಅಂಬರೀಶ್ ಹಾಗೂ ನಟಿ ಸುಮಲತಾ ಕುಟುಂಬದಲ್ಲೀಗ ಸಂಭ್ರಮ ಮನೆ ಮಾಡಿದೆ. ಮಾರ್ಚ್ 14 ರಂದು ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದೆ. ಅದಕ್ಕಾಗಿ ವಿಶೇಷ ತೊಟ್ಟಿಲು ಸಿದ್ಧವಾಗಿದೆ.
ಕಲಘಟಗಿ ಪಟ್ಟಣದ ಸಾವಕಾರ ಕುಟುಂಬದವರು ಸಿದ್ಧಪಡಿಸಿದ ಅಲಂಕೃತ ತೊಟ್ಟಿಲು ಅಂಬರೀಶ್ ಅವರ ಮನೆ ಸೇರಿದೆ. ಈ ಮೊದಲು ಡಾ. ರಾಜ್‌ಕುಮಾರ್, ನಟ ಯಶ್ ಅವರ ಮನೆಗೂ ಇಲ್ಲಿನ ತೊಟ್ಟಿಲು ಹೋಗಿತ್ತು.
ಸಾವಕಾರ ಕುಟುಂಬ ತೊಟ್ಟಲು ತಯಾರಿಕೆಗೆ ಪ್ರಸಿದ್ಧ ಮನೆತನವಾಗಿದೆ. ಎರಡು ತಿಂಗಳು ತೊಟ್ಟಿಲಿನ ಕೆಲಸ ನಡೆದಿದೆ.
ಆರಗು, ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ತೊಟ್ಟಲಿನ ಮೇಲೆ ಚಿತ್ರಗಳನ್ನು ಬರೆಯಲಾಗಿದೆ. ತೊಟ್ಟಿಲಿನ ಮೇಲೆ ಕೃಷ್ಣಾವತಾರ, ದಶಾವತಾರ, ರಾಮಾಯಣ, ದೇವರ ಸನ್ನಿಧಾನದಲ್ಲಿ ತೊಟ್ಟಿಲೊಳಗೆ ಮಗು ಮಲಗಿದ ಚಿತ್ರವಿದೆ.