ಸಿಎಂ ಸ್ಥಾನದ ಸಂಘರ್ಷದ ನಡುವೆ ರಾಜಣ್ಣ- ಡಿಕೆಶಿ ಭೇಟಿ: ರಾಜಕೀಯ ವಲಯದ ಕುತೂಹಲ
ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿರುವ ಹೊತ್ತಿನಲ್ಲೇ ಸಿಎಂ ಸಿದ್ದರಾಮಯ್ಯ ಪರಮಾಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತು ಡಿಕೆಶಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ಡಿಕೆಶಿ ವಿರುದ್ಧ ಹೇಳಿಕೆ ಕೊಡುವ ಮೂಲಕವೇ ರಾಜಣ್ಣ ಗುರುತಿಸಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಸ್ಥಾನದ ಬಗ್ಗೆ ಚರ್ಚೆ ಬಂದಾಗಲೆಲ್ಲ, ಅವರ ಪರ ನಿಂತು ಡಿಕೆಶಿ ಗೆ ಟಾಂಗ್ ಕೊಡುತ್ತಿದ್ದರು. ಇದೀಗ ದಿಡೀರ್ ಬದಲಾವಣೆಗೆ ಅಚ್ಚರಿ ಮೂಡಿಸಿದೆ.
ಶನಿವಾರ ಸಂಜೆ ಇದ್ದಕ್ಕಿದ್ದಂತೆ ಈ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಅಹಿಂದ ನಾಯಕರ ಸಭೆಗೂ, ರಾಜಣ್ಣ ಭೇಟಿಗೂ ಏನೋ ಲಿಂಕ್ ಇದೆ ಎಂದು ಅಂದಾಜಿಸಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಇನ್ನೈದು ವರ್ಷ ನಾನೇ ಸಿಎಂ ಎಂದು ಹೇಳಿದ ಬೆನ್ನಲ್ಲೇ ವಿಚಲಿತರಾಗಿರುವ ಡಿಕೆಶಿ, ಮುಂದಿನ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿಯೇ ಕೆ.ಎನ್. ರಾಜಣ್ಣ ಭೇಟಿಯಾಗಿದ್ದಾರೆ. ಆ ಮೂಲಕ ಜಾರಕಿಹೊಳಿಗೆ ಟಾಂಗ್ ಕೊಡಲಸಜ್ಜಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


