ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನ ನಡುವೆ ಮತ್ತೊಂದು ಆಸ್ತಿ ವಿವಾದ ಮುಂದೆಲೆಗೆ ಬಂದಿದೆ. ಈಗ ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಅಧಿಕಾರ ಯಾರಿಗಿದೆ ಎಂದು ಸರ್ಕಾರ ಮತ್ತು ಒಡೆಯರ ನಡುವೆ ಜಟಾಪಟಿ ಶುರುವಾಗಿದೆ. ಈ ಪ್ರಕರಣ ಸದ್ಯಕ್ಕೆ ಕೋರ್ಟ್ ಮೆಟ್ಟಿಲೇರಿದೆ. ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿ ಸರ್ಕಾರ ಕಾನೂನು ಹೋರಾಟ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮುಂಡಿ ಬೆಟ್ಟ ಖಾಸಗಿ ಆಸ್ತಿ ಎಂದು ಕೋಟಿನಲ್ಲಿ ಸ್ಟೇ ತಂದ ರಾಜಮನೆತನ. ಚಾಮುಂಡಿ ಬೆಟ್ಟ ಎಂದರೆ ಪವಿತ್ರ ಸ್ಥಳ. ಕರ್ನಾಟಕ, ಹಳೆ ಮೈಸೂರಿನ ಜನರಿಗೆ ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಮಹತ್ವವಿದೆ. ರಾಜ ಮನೆತನ ಚಾಮುಂಡಿ ಬೆಟ್ಟ ತನ್ನ ಖಾಸಗಿ ಆಸ್ತಿ ಎನ್ನಲು ಕಾರಣವಿನೆಂದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವೇನೆಂದರೆ “ಚಾಮುಂಡಿ ಬೆಟ್ಟದ ಕ್ಷೇತ್ರ ಪ್ರಾಧಿಕಾರ” ಎಂದು ರಚನೆ ಮಾಡಿ ವಿಧಾನಸಭೆಯಲ್ಲಿ ಅಂಗೀಕಾರ ಮಾಡಿದೆ ಇದರಿಂದ ಚಾಮುಂಡಿ ಬೆಟ್ಟದ ಹಿಡಿತವನ್ನು ಸಾಧಿಸಲು ರಾಜ್ಯ ಸರ್ಕಾರ ಹೊರಟಿದೆ. ಆದರೆ ಚಾಮುಂಡಿ ಬೆಟ್ಟದ ಮೇಲೆ ಯಾವುದೇ ಹಕ್ಕಿಲ್ಲ ಇದು ನಮ್ಮ ಖಾಸಗಿ ಆಸ್ತಿ ಈ ಪ್ರಾಧಿಕಾರ ರಚನೆ ಮಾಡುವುದರ ಮೂಲಕ ಬೆಟ್ಟವನ್ನು ಸರ್ಕಾರದ್ದು ಎಂದು ಹೇಳಲು ಹೊರಟಿದೆ ಎಂದು ಒಡೆಯರ್ ಕುಟುಂಬ ಕೋರ್ಟಿಗೆ ಹೋಗಿದ್ದಾರೆ, ಅವರಿಗೆ ಆರಂಭಿಕವಾಗಿ ಗೆಲುವು ಸಹ ಸಿಕ್ಕಿದೆ.
ರಾಜವಂಶದ ಪ್ರಕಾರ ಚಾಮುಂಡಿ ಬೆಟ್ಟದಲ್ಲಿರುವಂತಹ ಸಾಕಷ್ಟು ಆಸ್ತಿಯು ರಾಜವಂಶಕ್ಕೆ ಸೇರಿದ್ದು, ರಾಜೇಂದ್ರ ವಿಲಾಸ್ ಅರಮನೆ, ಚಾಮುಂಡೇಶ್ವರಿ ದೇವಸ್ಥಾನ, ಮಹಾಬಲೇಶ್ವರ ದೇವಸ್ಥಾನ, ನಾರಾಯಣಸ್ವಾಮಿ ದೇವಸ್ಥಾನ, ಜ್ವಾಲಾಮುಖಿ ದೇವಸ್ಥಾನ, ನಂದಿ ದೇವರು ಇವುಗಳು ರಾಜಮನೆ ರಾಜ ಮನೆತನಕ್ಕೆ ಸೇರಿದ್ದು ಎಂದು ಪ್ರಮೋದದೇವಿ ಒಡೆಯರ್ ಹೇಳಿದ್ದಾರೆ.
ಚಾಮುಂಡಿ ಬೆಟ್ಟವನ್ನು ನಿರ್ವಹಣೆಗೆ ಮಾತ್ರ ಸರ್ಕಾರಕ್ಕೆ ನಾವು ನೀಡಿದ್ದು ಅದರ ಸಂಪೂರ್ಣ ಅಧಿಕಾರ ಸರ್ಕಾರಕ್ಕಿಲ್ಲ, ಕಾನೂನು ನಮ್ಮ ಕಡೆಗೆ ಬಂದರೆ ಚಾಮುಂಡಿ ಬೆಟ್ಟದ ಸಂಪೂರ್ಣ ನಿರ್ವಹಣೆಯನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ರಾಣಿ ಪ್ರಮೋದ ದೇವಿ ಹೇಳಿದ್ದಾರೆ.