ಪಾರ್ಕಿಂಗ್ ಬ್ರೇಕ್ ಹಾಕುವುದನ್ನು ಮರೆತ ಪೈಲೆಟ್ : ರಿವರ್ಸ್ ಹೊರಟು ಆತಂಕ ಸೃಷ್ಟಿಸಿದ ಸಿಂಗಾಪೂರ್ ವಿಮಾನ

bec1ac9b-8b36-45b3-9049-276cbcff
Share It


ಹೊಸದಿಲ್ಲಿ: ವಿಮಾನದ ಪಾರ್ಕಿಂಗ್ ಬ್ರೇಕ್ ಹಾಕುವುದನ್ನು ಪೈಲೆಟ್ ಗಳು ಮರೆತ ಪರಿಣಾಮ ವಿಮಾನವು ಹಿಮ್ಮುಖವಾಗಿ ಚಲಿಸಿ ಆತಂಕ ಸೃಷ್ಟಿಸಿದ ಘಟನೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸಿಂಗಾಪುರ್ ನಿಂದ ಆಗಮಿಸಿದ್ದ ಸಿಂಗಾಪೂರ್ ಏರ್‌ಲೈನ್ಸ್ ನ SIA 406 ವಿಮಾನವು ನ.25 ರ ರಾತ್ರಿ ದೆಹಲಿಗೆ ಆಗಮಿಸಿತ್ತು. ಇದು ವಿಶ್ವದ ಅತಿದೊಡ್ಡ ಡಬಲ್ ಡೆಕ್ಕರ್ ವಾಣಿಜ್ಯ ವಿಮಾನವಾಗಿದ್ದು, ಪಾರ್ಕಿಂಗ್ ಬೇ ನಲ್ಲಿ ಇದ್ದಕ್ಕಿದ್ದಂತೆ ಹಿಮ್ಮುಖವಾಗಿ ಚಲಿಸಲು ಆರಂಭಿಸಿತು ಎನ್ನಲಾಗಿದೆ.

ತಕ್ಷಣವೇ ಎಚ್ಚೆತ್ತುಕೊಂಡ ಪೈಲಟ್ ಗಳು ಬ್ರೇಕ್ ಹಾಕಿ ವಿಮಾನವನ್ನು ನಿಲ್ಲಿಸಿದ್ದು, ಯಾವುದೇ ದುರ್ಘಟನೆ ನಡೆದಿಲ್ಲ ಎಂದು ವರದಿಯಾಗಿದೆ. ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದೆ ಅವರನ್ನು ಕೆಳಗಿಳಿಸಲಾಗಿದೆ. ಏರ್ ಬೇಸ್ ಸಿಬ್ಬಂದಿಯ ಮುನ್ಸೂಚನೆ ಹಾಗೂ ನಿಲ್ದಾಣದ ಸಿಬ್ಬಂದಿಯ ಮುಂಜಾಗ್ರತಾ ಕ್ರಮದಿಂದ ವಿಮಾನವನ್ನು ಮರಳಿ, ಪಾರ್ಕಿಂಗ್ ಸ್ಥಳಕ್ಕೆ ನಿಲ್ಲಿಸಲಾಗಿದೆ.

ಘಟನೆ ವೇಳೆ ಅಕ್ಕಪಕ್ಕದ ಯಾವುದೇ ವಿಮಾನ ಅಥವಾ ವಾಹನಗಳಿಗೆ ವಿಮಾನ ಅಪ್ಪಳಿಸದೆ ಇರುವ ಕಾರಣದಿಂದ ಅಪಾಯ ತಪ್ಪಿದೆ. ಇಲ್ಲವಾದಲ್ಲಿ ಭಾರಿ ಅನಾಹುತದ ಸಾಧ್ಯತೆ ಇತ್ತು ಎನ್ನಲಾಗಿದೆ. ಒಬ್ಬ ಸಿಬ್ಬಂದಿಗೆ ಮಾತ್ರ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಿ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಿಂಗಾಪೂರ್ ಏರ್‌ಲೈನ್ಸ್ ವಿಷಾಧ ವ್ಯಕ್ತಪಡಿಸಿದ್ದು, ಘಟನೆಯಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಕ್ಷಮೆ ಯಾಚಿಸುವುದಾಗಿ ತಿಳಿಸಿದೆ. ಆದರೆ, ಘಟನೆಯಿಂದ ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕ ಮನೆಮಾಡಿದ್ದು ಸುಳ್ಳಲ್ಲ.


Share It

You cannot copy content of this page