ಅಧಿಕೃತ ಘೋಷಣೆ: ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಶಿಂಧೆಗೆ ಭಾರಿ ಹಿನ್ನಡೆ
ಬೆಂಗಳೂರು: ರಣರೋಚಕ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರನ್ನು ಆಯ್ಕೆ ಮಾಡಲಾಗಿದೆ.
ದೇವೇಂದ್ರ ಫಡ್ನವಿಸ್ ಆಯ್ಕೆ ಬೆನ್ನಲ್ಲೇ ಮಾಜಿ ಸಿಎಂ ಏಕನಾಥ ಶಿಂಧೆ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಕುತೂಹಲ ಮೂಡಿಸಿದೆ. ‘ಮಹಾಯುತಿ’ ಬಣದಲ್ಲಿ ಏಕನಾಥ ಸಿಂಧೆ ಮತ್ತು ಫಡ್ನವಿಸ್ ನಡುವೆ ಸಿಎಂ ರೇಸ್ ನಡೆಯುತಿತ್ತು.
ಕಳೆದ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಪಡೆದಿದ್ದು, ಸಿಂಧೆ ನೇತೃತ್ವದ ಶಿವಸೇನೆಗೆ ನಿರೀಕ್ಷಿತ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಮೈತ್ರಿ ವಿಚಾರದಲ್ಲಿ ಬಿಜೆಪಿ, ಶಿವಸೇನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ ಎಂದು ನಂಬಲಾಗಿತ್ತು. ಹೀಗಾಗಿ, ಸಿಂಧೆ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದರು.
2010 ರಿಂದ 2015 ರವರೆಗೆ ಸಿಎಂ ಆಗಿ ಕಾರ್ಯನಿರ್ವಹಿಸಿದ್ದ ಫಡ್ನವಿಸ್, 2017 ರಲ್ಲಿ ನಡೆದ ರಾಜಕೀಯ ಪಲ್ಲಟದಲ್ಲಿ ಏಕನಾಥ್ ಸಿಂಧೆ ಸಿಎಂ ಆಗಿಸಿ, ತಾವು ಡಿಸಿಎಂ ಆಗಿದ್ದರು. ಇದೀಗ ಬಿಜೆಪಿ ಜಯಭೇರಿ ಭಾರಿಸಿದ್ದು, ಸ್ವತಃ ಸಿಎಂ ಆಗಲು ತಯಾರಿ ನಡೆಸಿದ್ದಾರೆ.
ಈ ನಡುವೆ ಏಕನಾಥ ಸಿಂಧೆ, ಆಸ್ಪತ್ರೆಗೆ ದಾಖಲಾಗಿದ್ದು, ರಾಜಕೀಯ ತಲ್ಲಣ ಸೃಷ್ಟಿಯ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನೇತೃತ್ವದ ಮಹಾ ಅಘಾಡಿ ಸಿಂಧೆ ಬಣವನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಇದು ಮುಂದಿನ ರಾಜಕೀಯ ತಲ್ಲಣಗಳಿಗೆ ಕಾರಣವಾಗುವ ಸಾಧ್ಯತೆಯಿದೆ.


