ಉಪಯುಕ್ತ ಸುದ್ದಿ

ರಾಣಿ ಚೆನ್ನಮ್ಮ ವಿವಿಯಲ್ಲಿ ಅತಿಥಿ ಉಪನ್ಯಾಸಕ ವೃತಿಗೆ ಅರ್ಜಿ ಆಹ್ವಾನ

Share It

ರಾಣಿ ಚೆನ್ನಮ್ಮ ವಿವಿಯಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ. ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅಧಿಸೂಚಿಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವ ವಿಧಾನ, ಅರ್ಹತೆಗಳು ಮತ್ತು ಇತರ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.

ಮುಖ್ಯವಾಗಿ ಅತಿಥಿ ಉಪನ್ಯಾಸಕರನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಆವರಣ, ಬೆಳಗಾವಿಯ ಅಧೀನಕ್ಕೊಳಪಡುವ ಸ್ನಾತಕೋತ್ತರ ಕೇಂದ್ರ ಹಾಗೂ ವಿಜಯಪುರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜು, ಬೆಳಗಾವಿಯ ಸ್ನಾತಕೋತ್ತರ ವಿಭಾಗಗಳಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು.

ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ :

www.rcub.ac.in ವೆಬ್ ಸೈಟ್ ನಲ್ಲಿ ನೀಡಲಾದ ಗೂಗಲ್ ಶೀಟ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಅರ್ಜಿಯನ್ನು ಸಲ್ಲಿಸಿದ ಬಳಿಕ ಒಂದು ಪ್ರತಿಯನ್ನು ಸಂದರ್ಶನ ದಿನ ತೆಗೆದುಕೊಂಡು ಹೋಗಬೇಕು. ಅಭ್ಯರ್ಥಿಗಳಿಗೆ ಯಾವುದೇ ಆಹ್ವಾನ ನೀಡುವುದಿಲ್ಲ. ಸಂದರ್ಶನದ ದಿನಾಂಕವನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 30-10-2024 , ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು. 0831 – 2565241

ರಾಣಿ ಚನ್ನಮ್ಮ ವಿವಿ, ಬೆಳಗಾವಿಯ ಮುಖ್ಯ ಆವರಣದ ಸಿಂಡಿಕೇಟ್ ಸಭಾಂಗಣದಲ್ಲಿ ಅಭ್ಯರ್ಥಿಗೆ ನೀಡಿದ ದಿನಾಂಕದಂದು ಸಂದರ್ಶನ ನಡೆಸಲಾಗುವುದು. ಇದಕ್ಕೆ ಮುನ್ನ ಅಭ್ಯರ್ಥಿಯ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು.

ಖಾಲಿ ಇರುವ ಹುದ್ದೆಗಳು :

ಕನ್ನಡ 4
ಅರ್ಥಶಾಸ್ತ್ರ 2
ಕಾಮರ್ಸ್‌ 4
ಎಂಎಸ್‌ಡಬ್ಲ್ಯೂ 2
ಇಂಗ್ಲಿಷ್ 3
ಕ್ರಿಮಿನಾಲಜಿ ಅಂಡ್ ಫಾರೆನ್ಸಿಕ್ ಸೈನ್ಸ್‌ 1
ಕಂಪ್ಯೂಟರ್ ಸೈನ್ಸ್‌ 7
ಶಿಕ್ಷಣ 1
ಇತಿಹಾಸ 3
ರಸಾಯನಶಾಸ್ತ್ರ 1
ಭೌತಶಾಸ್ತ್ರ 3
ಜೂವಾಲಜಿ 5
ಬಾಟನಿ 5
ಪತ್ರಿಕೋದ್ಯಮ 3
ಜಿಯೋಗ್ರಫಿಲೈಬ್ರರಿ ಅಂಡ್ ಇನ್ಫಾರ್ಮೇಷನ್ ಸೈನ್ಸ್‌ ಗಣಿತ – 113

ಮೀಸಲಾತಿ ಪಡೆಯುವ ಅಭ್ಯರ್ಥಿಗಳು ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿಯ ಜೊತೆ ಸಲ್ಲಿಸುವುದು ಕಡ್ಡಾಯ.

ಅರ್ಜಿಯ ಒಂದು ಪ್ರತಿಯನ್ನು ಭರ್ತಿ ಮಾಡಿ ಪ್ರತಿಯನ್ನು ವಿಳಾಸ- ಕುಲಸಚಿವರು ಆಡಳಿತ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ. ಇವರ ವಿಳಾಸಕ್ಕೆ/ಕುಲಸಚಿವರ ಕಾರ್ಯಾಲಯಕ್ಕೆ ಖುದ್ದು ಹಾಜರಾಗಿ ಕೊನೆಯ ದಿನಾಂಕದ ಒಳಗಾಗಿ ಕಛೇರಿ ಅವಧಿಯಲ್ಲಿ ಸಲ್ಲಿಸಬೇಕು. ಅಭ್ಯರ್ಥಿಗಳು ತಮ್ಮ ಸೇವಾ ಅನುಭವದ ಜೊತೆಗೆ ಕೆಲಸ ಮಾಡಿದ ಕಡೆ ಮುಖ್ಯಸ್ಥರ ಸಹಿಯನ್ನು ಹಾಕಿಸಬೇಕು.


Share It

You cannot copy content of this page