ಶ್ರೀಗಂಧ ಮರ ಕಡಿದ ವ್ಯಕ್ತಿಯ ಬಂಧನ

Share It

ಬೆಳಗಾವಿ : ಖಾನಾಪುರ ತಾಲೂಕು ನಾಗರಗಾಳಿ ವಲಯದ ಅರಣ್ಯದಲ್ಲಿ ಶ್ರೀಗಂಧದ ಮರ ಬೇರು ಸಮೇತ ಕಡಿದು ಸಾಗಿಸಿದ ಗರ್ಬೇನಟ್ಟಿ ಗ್ರಾಮದ ಮಂಜು ಬಸಪ್ಪ ಮುರಗೋಡ ಎಂಬುವನನ್ನು ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಸುಮಾರು 1 ಕೆಜಿ 200 ಗ್ರಾಂ ತೂಕದ ಶ್ರೀಗಂಧದ ಗಿಡವನ್ನು ಬೇರು ಸಮೇತ ಕಡಿದು ಒಯ್ದಿದ್ದಾನೆ. ಸಾಗಾಣಿಕೆಗೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಈತನನ್ನು ನ್ಯಾಯಾಲಯದ ಸೂಚನೆ ಮೇರೆಗೆ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ನಾಗರಗಾಳಿ ಎಸಿಎಫ್ ಶಿವಾನಂದ ಮಗದುಮ ನೇತ್ರತ್ವದಲ್ಲಿ ನಾಗರಗಾಳಿ ಆರ್‌ಎಫ್ ಒ ಪ್ರಶಾಂತ ಮಂಗಸೂಳಿ, ನೇರಡಾ ಡಿಆರ್ ಎಫ್.ಒ. ಎನ್.ಜಿ. ಹಿರೇಮಠ, ಸಿಬ್ಬಂದಿ ವಿಜಯ ಕೌಜಲಗಿ, ಮಂಜು ಗೌಡರ, ಪ್ರದೀಪ ತುರಮರಿ, ಶ್ರವಣ ಕುಮಾರ್ ಭಾಗವಹಿಸಿದ್ದರು. ನಾಗರಗಾಳಿ ವಲಯ ಅರಣ್ಯ ಅಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.


Share It

You May Have Missed

You cannot copy content of this page