ಬೆಂಗಳೂರು: ಅಪ್ರಾಪ್ತ ಮಕ್ಕಳ ಕೈಲಿ ಸೋಷಿಯಲ್ ಮೀಡಿಯಾ ದುರ್ಬಳಕೆ ಆಗುತ್ತಿದೆ ಎನ್ನವುದು ಭಾರತೀಯ ಪೋಷಕರ ಆಕ್ಷೇಪ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಕಠಿಣ ಕಾನೂನು ತರಲು ಮುಂದಾಗಿದೆ.
ಇದೇ ಫೆಬ್ರವರಿ 18 ರಿಂದ 18 ವರ್ಷದೊಳಗಿನ ಮಕ್ಕಳು ಸೋಷಿಯಲ್ ಮೀಡಿಯಾ ಅಕೌಂಟ್ ತೆರೆಯಲು ಪೋಷಕರ ಅನುಮತಿ ಪಡೆಯಬೇಕು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ‘ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ – 2023’ ಅನ್ನು ಜಾರಿಗೆ ತರಲಿದೆ.
ಈ ಆಕ್ಟ್ ಅಡಿಯಲ್ಲಿ ಮಕ್ಕಳ ಅಕೌಂಟ್ ಗೆ ಸಂಬಂಧಿಸಿದ ಡೇಟಾ ಸಂಗ್ರಹಕ್ಕೆ ಸೋಷಿಯಲ್ ಮೀಡಿಯಾ ಸಂಸ್ಥೆಗಳು ಪೋಷಕರ ಅನುಮತಿ ಪಡೆಯುವುದು ಕಡ್ಡಾಯ. ಅಕೌಂಟ್ ತೆರೆಯುವ ವ್ಯಕ್ತಿಗಳು, ಸೋಷಿಯಲ್ ಮೀಡಿಯಾ ಸಂಸ್ಥೆಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ನಿಬಂಧನೆಗಳನ್ನು ಆಕ್ಟ್ ನಲ್ಲಿ ಉಲ್ಲೇಖಿಸಲಾಗಿದೆ.
ಸಧ್ಯಕ್ಕೆ ನಿಯಮ ಉಲ್ಲಂಘನೆ ಮಾಡಿದರೆ ಯಾವುದೇ ದಂಡ ವಿಧಿಸಲು ತೀರ್ಮಾನಿಸಿಲ್ಲ. ಆದರೆ, ಆಕ್ಟ್ ನ ನಿಯಮಾನುಸಾರ 250 ಕೋಟಿ ರು.ವರೆಗೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ದಂಡ ವಿಧಿಸಲು ಆಕ್ಟ್ ಅಡಿಯಲ್ಲಿ ಅವಕಾಶ ನೀಡಲಾಗಿದೆ.
ಸರಕಾರ ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ ನ ಕರಡು ನಿಯಮಗಳನ್ನು ಫೆಬ್ರವರಿ 18 ರಿಂದ ಜಾರಿಗೊಳಿಸಲು ತೀರ್ಮಾನಿಸಿದ್ದು, ಪ್ರಸ್ತುತ ಸಾರ್ವಜನಿಕ ಆಕ್ಷೇಪಣೆಗಳನ್ನು ಸಲ್ಲಿಸಲು hhtp://mygov.in ಅವಕಾಶ ನೀಡಲಾಗಿದೆ.