ಗ್ರಾಮ ಲೆಕ್ಕಿಗರು, ಸಹಾಯಕರಿಗೆ ಸರಕಾರದ ಗುಡ್ ನ್ಯೂಸ್ : ಆಧಾರ್ ಜೋಡಣೆಗೆ ಶ್ರಮಿಸಿದವರಿಗೆ ಬೋನಸ್
ಬೆಂಗಳೂರು: ರಾಜ್ಯದಲ್ಲಿ ಜಮೀನಿನ ದಾಖಲೆಗಳಿಗೆ ಆಧಾರ್ ಜೋಡಣೆ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಇದಕ್ಕಾಗಿ ಶ್ರಮಿಸಿದ ಸಿಬ್ಬಂದಿಗೆ ಬೋನಸ್ ನೀಡಲು ಕಂದಾಯ ಇಲಾಖೆ ತೀರ್ಮಾನಿಸಿದೆ.
ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಆಧಾರ್ ಜೋಡಣೆ ಕಾರ್ಯ ಯಶಸ್ವಿಯಾಗಿ ನಡೆದಿದೆ. ಈವರೆಗೆ 2.12 ಕೋಟಿ ಜಮೀನುಗಳಿಗೆ ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸಲಾಗಿದೆ. ಹೀಗಾಗಿ, ಇದಕ್ಕೆ ಶ್ರಮಿಸಿದ ಸಿಬ್ಬಂದಿಗೆ ಗೌರವಧನ ನೀಡಲು ಇಲಾಖೆ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
2.12 ಕೋಟಿ ಆಸ್ತಿಗಳ ಆಧಾರ್ ಜೋಡಣೆ ಯಶಸ್ವಿಯಾಗಿದೆ. ರೆವಿನ್ಯೂ ಲೇಔಟ್ ನಲ್ಲಿನ ನಿವೇಶನಗಳಿಗೆ ಮಾತ್ರ ಆಧಾರ್ ಜೋಡಣೆ ಸಾಧ್ಯವಾಗಿಲ್ಲ. 51,56,715 ಅಸ್ತಿಗಳು ಪೋತಿಯಾದವರ ಹೆಸರಿನಲ್ಲಿದೆ. ಹೀಗಾಗಿ, ಇವುಗಳ ಖಾತೆ ಅಭಿಯಾನ ನಡೆಯುತ್ತಿದೆ ಎಂದು ತಿಳಿಸಿದರು.
ಆಧಾರ್ ಜೋಡಣೆ ಕಾರ್ಯವನ್ನು ಯಶಸ್ವಿ ಮಾಡಿದ ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರೋತ್ಸಾಹ ಧನ ನೀಡಲು ಇಲಾಖೆ ತೀರ್ಮಾನಿಸಿದ್ದು, ಅವರು ಮಾಡಿರುವ ಆಧಾರ್ ಜೋಡಣೆ ಕಾರ್ಯದ ಸಂಖ್ಯೆಗೆ ಅನುಗುಣವಾಗಿ ಗೌರವಧನ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ, ಇಲಾಖೆ 4.5 ಕೋಟಿ ರು. ಬಿಡುಗಡೆ ಮಾಡಿದೆ ಎಂದರು.


