ಬೆಂಗಳೂರು: ಕೇಂದ್ರ ಸರ್ಕಾರ ವಿರುದ್ಧ ತೆರಿಗೆ ತಾರತಮ್ಯ ಖಂಡಿಸಿ “ನಮ್ಮ ತೆರಿಗೆ ನಮ್ಮ ಹಕ್ಕು” ಎಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಅತಿಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ತಾರತಮ್ಯವಾಗುತ್ತಿದೆ. ನಮ್ಮ ತೆರಿಗೆ ಹಣ ಉತ್ತರ ಪ್ರದೇಶ, ದೆಹಲಿ, ಬಿಹಾರಕ್ಕೆ ಕೊಡುತ್ತಿದ್ದಾರೆ. ಆಂಧ್ರಕ್ಕಿಂತಲೂ ಕಡಿಮೆ ಹಣ ನಮಗೆ ನೀಡಿದ್ದಾರೆ. ಅವರಿಗಿಂತ ಕೀಳಾಗಿದ್ದೇವಾ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ನಿರ್ಮಲಾ ಸೀತಾರಾಮನ್ ಸೇರಿ ಐವರು ಸಚಿವರು ನಮ್ಮವರೇ ಇದ್ದಾರೆ. ನಮ್ಮಲ್ಲೇ ಇದ್ದುಕೊಂಡು ಈಗ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ತಾಯಿ ಚಾಮುಂಡೇಶ್ವರಿ ಮಳೆ-ಬೆಳೆ ಕೊಟ್ಟಿದ್ದಾಳೆ. ಅದ್ದರಿಂದ ಈ ವರ್ಷ ದಸರಾ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ತಮಿಳುನಾಡಿನ ಹೋರಾಟ ಕಡಿಮೆಯಾಗಿದೆ. ಎಲ್ಲ ಡ್ಯಾಂಗಳು ತುಂಬಿವೆ. ಕಟ್ ಆಗಿದ್ದ ತುಂಗಭದ್ರಾ ಡ್ಯಾಂನ ಗೇಟ್ ಅನ್ನು ಆರು ದಿನದಲ್ಲೇ ಕೂರಿಸಿ ನೀರು ಪೋಲಾಗುತ್ತಿದ್ದದ್ದನ್ನು ನಿಲ್ಲಿಸಿದ್ದೇವೆ. ಅ.16 ಐದನೇ ಹಂತದ ಕಾವೇತಿ ಕುಡಿಯುವ ಯೋಜನೆ ಚಾಲನೆ ಸಿಗಲಿದೆ. ಇದರಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮೈಸೂರಿನ ದಸರಾ ಲೈಟಿಂಗ್ಸ್ ಗೆ ಕೋಟ್ಯಂತರ ರೂಪಾಯಿ ಅದಕ್ಕೆ ಖರ್ಚು ಮಾಡಿದ್ದೇವೆ. ಇನ್ನು ಸ್ವಲ್ಪ ದಿನಗಳ ಕಾಲ ಹಾಗೆ ಇರಲಿದೆ. ನಾನು ಆ ರೀತಿಯ ಲೈಟಿಂಗ್ಸ್ ಇಲ್ಲಿವರೆಗೆ ಎಲ್ಲೂ ನೋಡಿಲ್ಲ. ಲೈಟಿಂಗ್ಸ್ ನೋಡಿ ರಾಜ್ಯದ ಜನತೆ ಸಂತೋಷ ಪಡಬೇಕು ಎಂದರು.