ರಾಜಕೀಯ ಸುದ್ದಿ

ಸಾರಿಗೆ ಸಾಲದ ಕುರಿತು ಬಿಜೆಪಿ ಟೀಕೆ: ಅಂಗೈ ತೋರಿಸಿ ಅವಲಕ್ಷಣ ಮಾಡಿಸಿಕೊಳ್ಳೋದೇಕೆ ಎಂದು ಕೈ ವ್ಯಂಗ್ಯ

Share It

ಬೆಂಗಳೂರು: ಬಿಜೆಪಿ ಅವರೇ ನಿಜವಾಗಲೂ ತಮಗೆ ಸ್ವಲ್ಪವಾದರೂ ಮಾನ ಮಾರ್ಯಾದೆ ಅಥವಾ ನೈತಿಕತೆಗೆ ಅರ್ಥ ಗೊತ್ತಿದೆಯೇ? ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ಆಕ್ರೋಶ ಹೊರಹಾಕಿದೆ.

ನಾವು ಈಗಾಗಲೇ ಹತ್ತು ಹಲವು ಬಾರಿ ಹೇಳಿದ್ದೇವೆ. ಸಾರಿಗೆ ಸಂಸ್ಥೆಗಳು ಲೋನ್ ತೆಗೆದುಕೊಳ್ಳಲೇಬೇಕು ಯಾಕೆಂದರೆ, ತಮ್ಮ ಪಕ್ಷದ ದುರಾಡಳಿತದ ಅವಧಿಯಲ್ಲಿನ ರೂ.5,900 ಕೋಟಿ ಸಾಲ‌ ತೀರಿಸುವ ಅನಿವಾರ್ಯತೆ ಇದೆ. ಈ ಲೋನ್ ತೆಗೆದುಕೊಳ್ಳುತ್ತಿರುವುದು ತಮ್ಮ ಕಾಲದಲ್ಲಿನ ಬಾಕಿ ಉಳಿಸಿ ಹೋಗಿದ್ದ ನೌಕರರ ಭವಿಷ್ಯ ನಿಧಿ ಮೊತ್ತ ಮತ್ತು ಡೀಸೆಲ್ ಬಾಕಿ ಮೊತ್ತ ಪಾವತಿಸಲು ಎಂಬುದನ್ನು ತಮಗೆ ಪ್ರತಿ ಬಾರಿ ಹೇಳಲು ಅಸಹ್ಯವಾಗುತ್ತಿದೆ ಎಂದು ಟೀಕಿಸಿದೆ.

ನಮ್ಮ ಸರ್ಕಾರದ ಕೊನೆಯಲ್ಲಿ ಅಂದರೆ ಮೇ 2018 ರ ಅಂತ್ಯಕ್ಕೆ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ಬಾಕಿ ಇದ್ದದ್ದು ರೂ14.71 ಕೋಟಿ ಅದೇ 2023 ರ ಮೇ ಅಂತ್ಯಕ್ಕೆ ತಮ್ಮ ಸರ್ಕಾರ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ರೂ 1380.59 ಕೋಟಿ. ನಾವು ನಿಮ್ಮಗಳ ರೀತಿ ಸಾರಿಗೆ ಸಂಸ್ಥೆಗಳನ್ನು ಸಂಕಷ್ಟದ ಸುಳಿಯಲ್ಲಿ ಸಿಲುಕಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವೇ ನಾಲ್ಕು ನಿಗಮಗಳಿಗೆ ರೂ. 2000 ಕೋಟಿ ಲೋನ್ ತೆಗೆದುಕೊಳ್ಳಲು ಅನುಮತಿ‌ ನೀಡಿದೆ ಎಂದಿದೆ. 

ನಾವು ಏನೆಲ್ಲಾ ಹೇಳಬಹುದೋ ಎಲ್ಲವನ್ನೂ ಹೇಳಿ ಆಯಿತು‌‌. ಸಾಮಾನ್ಯ ಜ್ಞಾನ, ಸಾಮಾನ್ಯ ಗಣಿತ ಬಾರದ ಅಜ್ಞಾನಿಗಳು ಎಂದೂ ಸಹ ಹೇಳಿದ ಮೇಲೂ ಸರಿಯಾದ‌ ಮಾಹಿತಿ ಕಲೆಹಾಕಿಯಾದರೂ ಮಾತನಾಡಬಾರದೇ? ಕೈ ತೋರಿಸಿ ಯಾಕೆ ಅವಲಕ್ಷಣ ಮಾಡಿಸಿಕೊಳ್ಳುತ್ತಾರೋ‌ ಗೊತ್ತಿಲ್ಲ ಎಂದರು.

ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಆಡಳಿತದಲ್ಲಿ ರಾಜ್ಯ ರೂ 2 ಲಕ್ಷ ಕೋಟಿ ಸಾಲ ಮಾಡಿದ್ದು, ದೇಶದ‌ 67 ವರ್ಷಗಳ ಇತಿಹಾಸದಲ್ಲಿ ಆಗಿರದಷ್ಟು ಸಾಲ ಇಂದಿನ ಕೇಂದ್ರ ಸರ್ಕಾರ 2014-2025 ರ ಅವಧಿಗೆ ರೂ 149 ಲಕ್ಷ ಕೋಟಿಗಳ ಸಾಲ, ಇದಾವುದರ ಬಗ್ಗೆ ಚಕಾರವೆತ್ತಲು ಸಾಹಸ ಮಾಡದ ಇವರು ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಾ ಜನರನ್ನು ದಾರಿ ತಪ್ಪಿಸುತ್ತಾ, ಟ್ಟೀಟ್ ಮಾಡುವುದೇ ದೊಡ್ಡ ಸಾಧನೆ ಎಂದು ತಿಳಿದಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದೆ.


Share It

You cannot copy content of this page