ಜಯಲಲಿತಾ ಅವರ 27 ಕೆ.ಜಿ. ಚಿನ್ನ ತಮಿಳುನಾಡು ಸರಕಾರಕ್ಕೆ ವಾಪಸ್ !
ಬೆಂಗಳೂರು: ಜಯಲಲಿತಾ ಅವರಿಗೆ ಸೇರಿದ್ದ 27 ಕೆ.ಜಿ. ಚಿನ್ನ ಸೇರಿದಂತೆ 1,606 ವಸ್ತುಗಳನ್ನು ತಮಿಳುನಾಡು ಸರಕಾರಕ್ಕೆ ವಾಪಸ್ ಮಾಡಲಾಗಿದೆ ಎಂದು ವಿಶೇಷ ಸರಕಾರಿ ಅಭಿಯೋಜಕ ಕಿರಣ್ ಜವಳಿ ತಿಳಿಸಿದ್ದಾರೆ.
ಜಯಲಲಿತಾ ಅವರ ಮರಣಾನಂತರ ಆದಾಯ ತೆರಿಗೆ ಇಲಾಖೆ ಸೇರಿ ವಿವಿಧ ಇಲಾಖೆಗಳು ಅವರ ಬಳಿಯಿದ್ದ ಆಸ್ತಿ, ಚಿನ್ನಾಭರಣ ಸೇರಿ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಆ ಎಲ್ಲ ವಸ್ತುಗಳನ್ನು ತಮಿಳುನಾಡು ಸರಕಾರಕ್ಕೆ ವಾಪಸ್ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ಜಯಲಲಿತಾ ಅವರಿಗೆ ಸೇರಿದ 27 ಕೆ.ಜಿ ಚಿನ್ನ, ಬೆಳ್ಳಿ ಸೇರಿ ವಿವಿಧ ಬೆಲೆಬಾಳುವ ವಸ್ತುಗಳು, ಆಸ್ತಿಪತ್ರಗಳನ್ನು ತಮಿಳುನಾಡು ಸರಕಾರಕ್ಕೆ ಒಪ್ಪಿಸಲಾಗಿದೆ. ಇದೇ ವೇಳೆ ಕರ್ನಾಟಕ ಸರಕಾರ ವಿಚಾರಣೆಗೆಂದು ವ್ಯಯ ಮಾಡಿದ 13 ಕೋಟಿ. ರು.ಗಳನ್ನು ತಮಿಳುನಾಡು ಸರಕಾರ ಕರ್ನಾಟಕ ಸರಕಾರಕ್ಕೆ ಭರಿಸಿದೆ.


