ಸುದ್ದಿ

ಜಿಲೆಟಿನ್ ಕಡ್ಡಿ ಸ್ಪೋಟಕ್ಕೆ ಬೆಚ್ಚಿಬಿದ್ದ ಜನ

Share It

ಬೆಳಗಾವಿ : ಜಿಲೆಟಿನ್ ಕಡ್ಡಿಗಳ ಸ್ಫೋಟಕ್ಕೆ ಜನರು ಬೆಚ್ಚಿಬಿದ್ದ ಘಟನೆ ನಡೆದಿದೆ. ಹಿರೇಬಾಗೇವಾಡಿ ಬಳಿಯ ದರ್ಗಾ ಬಳಿಯ ಕ್ರಷರ್ ನಲ್ಲಿ ಈ ಘಟನೆ ನಡೆದಿದೆ.

ಉದಯ್ ಶಿವಕುಮಾರ್ ಎಂಬುವವರ ಕ್ರಷರ್ ಬಳಿ ಇರುವ ಗುಡ್ಡಕ್ಕೆ ಸ್ಥಳೀಯರು ಬೆಂಕಿ ಹಚ್ಚಿದ್ದರು. ಬೆಂಕಿಯ ಕೆನ್ನಾಲಿಗೆ ಕಿಡಿ ಕ್ರಷರ್ ಶೆಡ್ ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಏಕಾಏಕಿ ಸಂಭವಿಸಿದ ಸ್ಫೋಟಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.


Share It

You cannot copy content of this page