ಬೆಂಗಳೂರು: 5 ನೇ ಗ್ರೀನ್ ಊರ್ಜಾ ಮತ್ತು ಎನರ್ಜಿ ಎಫಿಷಿಯನ್ಸಿ ಪ್ರಶಸ್ತಿ 2025 ಅನ್ನು ಕೆ ಎಸ್ ಆರ್ ಟಿ ಸಿ ಗೆ ನೀಡಲಾಯಿತು.
ನಾಗರಾಜ ಮೂರ್ತಿ, ಉಪ ಮುಖ್ಯ ಮೆಕಾನಿಕಲ್ ಇಂಜಿನಿಯರ್, ಕೆ ಎಸ್ ಆರ್ ಟಿ ಸಿ ರವರಿಗೆ ಪ್ರಶಸ್ತಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಅಧ್ಯಕ್ಷರಾದ ಅನಿಲ್ ಕುಮಾರ್ ಜೈನ್, ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಅನಿಲ್ ರಜ್ದಾನ್ (IAS), ಕೇಂದ್ರ ವಿದ್ಯುತ್ ಪ್ರಾಧಿಕಾರದ (CEA) ನಿವೃತ್ತ ಅಧ್ಯಕ್ಷೆ ನೀರ್ಜಾ ಮಠೂರ್, (SECI) ವ್ಯವಸ್ಥಾಪಕ ನಿರ್ದೇಶಕ ಡಾ. ಅಶ್ವಿನಿ ಕುಮಾರ್ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ವಿಭಾಗದ ನಿರ್ದೇಶಕರಿಂದ ಸ್ವೀಕರಿಸಿದರು.
ಈಗಾಗಲೇ KSRTC ಅನೇಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ದೇಶದ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಸಂಸ್ಥೆಯ ಕಾರ್ಯಾಚರಣೆಯ ವಿಧಾನದ ಅಧ್ಯಯನ ನಡೆಸಲು ವಿವಿಧ ರಾಜ್ಯಗಳ ಸಾರ್ವಜನಿಕ ಸಾರಿಗೆ ಇಲಾಖೆಯ ಸಚಿವರು, ಅಧಿಕಾರಿಗಳು ಆಗಮಿಸಿದ್ದಾರೆ.
ಇಂತಹ ಸಂಸ್ಥೆಗೆ ಇದೀಗ ಮತ್ತೊಂದು ಮಹತ್ವದ ಗರಿ ಮೂಡಿದ್ದು, ಊರ್ಜಾ ಮತ್ತು ಎನರ್ಜಿ ಎಫಿಷಿಯನ್ಸಿ ಪ್ರಶಸ್ತಿ ದೊರೆತಿರುವುದು ಸಂಸ್ಥೆಯ ಕಾರ್ಯಾವೈಖರಿಗೆ ಹಿಡಿದ ಕೈಗನ್ನಡಿ ಎನ್ನಬಹುದು.