ಅಪರಾಧ ಸುದ್ದಿ

ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಕರಾಳ ದಿನಾಚರಣೆ ನಡೆಸಲು ಎಂಇಎಸ್ ಸಿದ್ಧತೆ

Share It

ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಣೆಗೆ ‌ನಿರ್ಧಾರ ಮಾಡಿದ ಎಂಇಎಸ್

ಬೆಳಗಾವಿ: ಬೆಳಗಾವಿಯ ಮರಾಠಾ ಮಂಡಲ ಕಾರ್ಯಾಲಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವು ಮುಖಂಡರು ಸಭೆ ನಡೆಸಿ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಣೆಗೆ ‌ನಿರ್ಧಾರ ಮಾಡಲಾಗಿದೆ.

ಕರಾಳ ದಿನದ ಮೆರವಣಿಗೆ ನಡೆಸಲು ಸಭೆಯಲ್ಲಿ ಎಂಇಎಸ್ ನಿರ್ಧಾರ ಮಾಡಿದೆ. ನವೆಂಬರ್‌ 1ರಂದು ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಕರಾಳ ದಿನ‌ ಆಚರಣೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ಕೂಡ ನೀಡಿದ್ದರು.

ಡಿಸಿ ಹೇಳಿಕೆ ಬೆನ್ನಲ್ಲೇ ಸಭೆ ಮಾಡಿ ಎಂಇಎಸ್ ಪುಂಡರು ಕ್ಯಾತೆ ತೆಗೆದಿದ್ದಾರೆ. ನ.1ರಂದು ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ‌ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು ಮತ್ತೊಂದೆಡೆ ‌ಬೆಳಗಾವಿಯಲ್ಲಿ ಕರಾಳ ದಿನ ಆಚರಣೆಗೆ MES ನಿರ್ಧಾರ ಮಾಡಿದೆ.

ಮಹಾರಾಷ್ಟ್ರ ನಾಯಕರ ಆಹ್ವಾನಿಸಿ ಶಾಂತಿಗೆ ಭಂಗ ತರಲು‌ MES ಯತ್ನ ಮಾಡುತ್ತಿದೆ. ಮಹಾರಾಷ್ಟ್ರ ವಿಧಾನಸಭೆ ‌ಚುನಾವಣೆ ಘೋಷಣೆಗೆ ದಿನಗಣನೆ ಹಿನ್ನೆಲೆ MES ಮುಖಂಡರ ಆಹ್ವಾನಕ್ಕೆ ಮಹಾರಾಷ್ಟ್ರ ನಾಯಕರು ಕಾಯ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಮಹಾ ನಾಯಕರು ಹುನ್ನಾರ ಮಾಡ್ತಿದ್ದಾರೆ.


Share It

You cannot copy content of this page