ಬೆಂಗಳೂರು: ಬಜೆಟ್ ನಲ್ಲಿ 1000 ಬಸ್ ನೀಡಲು ತೀರ್ಮಾನಿಸಿದ್ದ ಘೋಷಣೆಯನ್ನು ಸಿಎಂ ಸಿದ್ದರಾಮಯ್ಯ ಪರಿಷ್ಕರಿಸಿದ್ದು, ಆ ಸಂಖ್ಯೆಯನ್ನು2000 ಕ್ಕೆ ಏರಿಸಿದ್ದಾರೆ.
ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಪರಿಷ್ಕೃತ ಬಜೆಟ್ ಘೋಷಣೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ. ಬಜೆಟ್ ಮಂಡನೆಯ ದಿನ ಸಾರಿಗೆ ನಿಗಮಗಳಲ್ಲಿ ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ಬಸ್ ಖರೀದಿಸುವ ತೀರ್ಮಾನವನ್ನು ಘೋಷಿಸಲಾಗಿತ್ತು.
ಆದರೆ, ಸಾರಿಗೆ ನಿಗಮಗಳ ಬೇಡಿಕೆ ಮತ್ತು ಸಾರ್ವಜನಿಕ ವಲಯದ ಅಗತ್ಯಕ್ಕೆ ಇನ್ನೂ ಹೆಚ್ಚಿನ ಬಸ್ಸುಗಳ ಅಗತ್ಯವಿದೆ ಎಂಬುದನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಸಿಎಂ ಘೋಷಣೆ ಮಾಡಿದ್ದಾರೆ.
GCC ಮೂಲಕ ಒಂದು ಸಾವಿರ ಬಸ್ ಗಳ ಖರೀದಿಸಲು ತೀರ್ಮಾನಿಸಲಾಗಿತ್ತು. ಇದನ್ನು ಪರಿಷ್ಕರಿಸಿ2000 ಬಸ್ ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಸರಕಾರ ತೀರ್ಮಾನಿಸಿದೆ ಎಂದು ಸಿಎಂ ತಮ್ಮ ಘೋಷಣೆ ಪತ್ರದಲ್ಲಿ ತಿಳಿಸಿದ್ದಾರೆ.