ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚುವುದು ಗ್ಯಾರೆಂಟಿ!
ಬೆಂಗಳೂರು: ಗ್ಲೋಬಲ್ ಸಿಟಿಯಾಗಿದ್ದ ನಮ್ಮ ಬೆಂಗಳೂರು ನಗರವನ್ನ, ಗಾರ್ಬೇಜ್ ಸಿಟಿ, ಗುಂಡಿಗಳ ಸಿಟಿ, ಗೂಂಡಾಗಳ ಸಿಟಿ ಮಾಡಿ ಬ್ರ್ಯಾಂಡ್ ಬೆಂಗಳೂರಿಗೆ ಕಳಂಕ ತಂದಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಬೆಂಗಳೂರಿನ ಜನತೆ ಕಾಯುತ್ತಿದ್ದಾರೆ.
ಜಿಬಿಎ ಚುನಾವಣೆಗೆ ಬಿಜೆಪಿ ಸಂಪೂರ್ಣ ಸಿದ್ಧವಾಗಿದ್ದು, ಬೆಂಗಳೂರಿನ ಪ್ರಜ್ಞಾವಂತ, ಪ್ರಬುದ್ಧ ಮತದಾರರು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ.


