ಬೆಂಗಳೂರು: ರಾಜ್ಯದ ಹಲವೆಡೆ ಒಂದು ವಾರದಿಂದ ಮಳೆ ಯಾಗುತ್ತಿದ್ದು, ಬೆಂಗಳೂರಿನಲ್ಲಿ ಅ.28ರವರೆಗೆ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲಟ್೯ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ನಲ್ಲೂ ಮಳೆಯಾಗಲಿದೆ. ಕದ್ರಾ, ಕುಂದಾಪುರ, ಮುಂಡಗೋಡು, ಹಿರೇಕೆರೂರು, ಹೊನ್ನಾಳಿ, ಕಾರವಾರ, ಶಿವಮೊಗ್ಗ, ಚಿತ್ರದುರ್ಗ, ಆನವಟ್ಟಿಯಲ್ಲಿ ಮಳೆಯಾಗಿದೆ. ಕಿರವತ್ತಿ, ಹೊನ್ನಾವರ, ಹುಂಚದಕಟ್ಟೆ, ಶ್ರವಣಬೆಳಗೊಳ, ದಾವಣಗೆರೆ, ಕುಣಿಗಲ್, ಕೃಷಗಣರಾಜಸಾಗರ, ಬನವಾಸಿ, ಜಯಪುರ, ಶ್ರೀರಂಗಪಟ್ಟಣ, ತರೀಕೆರೆ, ನಾಯಕನಹಟ್ಟಿ, ಎನ್ಆರ್ಪುರ, ತರೀಕೆರೆ, ಗೇರುಸೊಪ್ಪ, ಗೋಕರ್ಣದಲ್ಲಿ ಮಳೆಯಾಗಿದೆ.
ಕೊಪ್ಪ, ಹಡಗಲಿ, ಶಿರಾಲಿ, ಅಂಕೋಲಾ, ಕೋಟ, ಲೋಂಡಾ, ತಿಪಟೂರು, ಬೆಳ್ಳಟ್ಟಿ, ನಾಪೋಕ್ಲು, ಹೆಸರಘಟ್ಟ, ಚಿಕ್ಕಮಗಳೂರು, ಮಾಗಡಿ, ಅಜ್ಜಂಪುರ, ಕಳಸ, ಕೃಷ್ಣರಾಜಪೇಟೆ, ಕಾರ್ಕಳ, ಸಂಡೂರು, ಹೊಸದುರ್ಗ, ರಾಮನಗರ, ಹರಪನಹಳ್ಳಿ, ಸೇಡಬಾಳ, ಲಕ್ಷ್ಮೇಶ್ವರ, ಕುಂದಗೋಳದಲ್ಲಿ ಮಳೆಯಾಗಿದೆ.
ಕಲಬುರಗಿಯಲ್ಲಿ 33.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 18.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.