SSLC ಪಾಸ್ ಆದವರಿಗೆ ಒಂದೊಳ್ಳೆ ಉದ್ಯೋಗಾವಕಾಶ!! ಬೇಗನೆ ಅರ್ಜಿಯನ್ನು ಸಲ್ಲಿಸಿ. ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸೆಸ್ ಲಿಮಿಟೆಡ್ ಕಂಪನಿಯ ಕೊಲ್ಕತ್ತಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಖಾಲಿ ಇರುವ ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್, ಹ್ಯಾಂಡಿಮ್ಯಾನ್ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ. ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆ ಹಾಗೂ ಇತರ ಮಾಹಿತಿಯನ್ನು ತಿಳಿಯೋಣ ಬನ್ನಿ.
ಹುದ್ದೆ ಗಳ ವಿವರ :
ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್ -30, Rs.24,960
ಹ್ಯಾಂಡಿಮ್ಯಾನ್ – 112, Rs.22,530
ವಿದ್ಯಾರ್ಹತೆ :
ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಗರಿಷ್ಠ 28 ವರ್ಷ ಮೀರಿರಬಾರದು.
ಒಬಿಸಿ ವರ್ಗಕ್ಕೆ ಗರಿಷ್ಠ ವಯೋಮಿತಿ 31 ವರ್ಷ ಇರಬಹುದು.
SC ST ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ಆಗಿರಬಹುದು.
ಅರ್ಜಿ ಹಾಕುವವರು ಟ್ರೇಡ್ ಟೆಸ್ಟ್ ದಿನಾಂಕದಂದು ಮೂಲ ದಾಖಲೆಗಳು, ಚಾಲನ ಪರವಾನಗಿ ಹಾಜರುಪಡಿಸುವುದು.
ಹ್ಯಾಂಡಿಮ್ಯಾನ್ ಹುದ್ದೆಗೆ ಅರ್ಜಿ ಹಾಕುವವರಿಗೆ ಕೋಲ್ಕತ್ತ ಸ್ಥಳೀಯ ಭಾಷೆ ಮಾತನಾಡಲು, ಇಂಗ್ಲಿಷ್ ಅರ್ಥ ಮಾಡಿಕೊಳ್ಳಲು ಬರಬೇಕು.
ಅರ್ಜಿಯನ್ನು ಕುರಿತ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
https://aiasl.in/Recruitment, https://www.aiasl.in/
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕ:
ಕೊನೆಯ ದಿನಾಂಕ 31-10-24, ಸಾಮಾನ್ಯ ವರ್ಗದವರಿಗೆ ಅರ್ಜಿಯ ಶುಲ್ಕ 500 ರೂ. ಉಳಿದ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಯ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳನ್ನು 3 ವರ್ಷದ ಅವಧಿಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಿ ಬಳಿಕ ಅವರ ಕಾರ್ಯದಕ್ಷತೆಯ ಮೇರೆಗೆ ಮುಂದುವರೆಸಲಾಗುವುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜನ್ಮ ದಿನಾಂಕ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಇಮೇಲ್ ವಿಳಾಸ, ಮೊಬೈಲ್ ನಂಬರ್ ಇತ್ಯಾದಿ.