ಶಿಗ್ಗಾಂವಿ: “ಕಾಂಗ್ರೆಸ್ ನಲ್ಲಿ ಬಂಡಾಯ ಭುಗಿಲೆದ್ದಿದ್ದು, ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಖಾದ್ರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಶಿಗ್ಗಾವ್ ಉಪಚುನಾವಣೆ ನಾಮಪತ್ರ ಸಲ್ಲಿಸುವುದು ಕೊನೆಯ ದಿನವಾದ ಇಂದು ಖಾದ್ರಿ ನಾಮಪತ್ರ ಸಲ್ಲಿಕೆ ಮಾಡಿದರು. ನೆನ್ನೆ ರಾತ್ರಿಯೇ ಡಿಸಿಎಂ ಮತ್ತು ಸಿಎಂ ಅವರ ಮನವೊಲಿಸುವ ಕೆಲಸ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಜತೆಯಾಗಿ ನಿಂತು ಕೆಲಸ ಮಾಡುವ ಭರವಸೆ ವ್ಯಕ್ತಪಡಿಸಿದ್ದರು.
ಆದರೆ, ಬೆಂಬಲಿಗರ ಒತ್ತಾಯಕ್ಕೆ ಮಣಿದು ಪಕ್ಷೇತರ ಅಭ್ಯರ್ಥಿ ಯಾಗಿನಾಮಪತ್ರ ಸಲ್ಲಿಸಲು ಕೊನೆಯ ಹದಿಮೂರು ನಿಮಿಷಗಳು ಇರುವಾಗ ಓಡೋಡಿ ಬಂದ ಮಾಜಿ ಶಾಸಕ ಖಾದ್ರಿ ಅವರು ತಮ್ಮ ಅಪಾರ ಬೆಂಬಲಿಗರ ಜೊತೆ ಪಾದಯಾತ್ರೆ ಮುಖಾಂತರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.