ಬೆಂಗಳೂರು: ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಅವರ ಜನ್ಮದಿನದ ಅಂಗವಾಗಿ ಪದ್ಮನಾಭ ನಗರ ಕ್ಷೇತ್ರದಲ್ಲಿ ಭೋಜನಕೂಟ ಹಾಗೂ ಮಹಿಳೆಯರಿಗೆ ಉಡುಗೊರೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿತ್ತು.
ಹೊಸಕೆರೆಹಳ್ಳಿ ವಾರ್ಡ್ ವ್ಯಾಪ್ತಿಯ ಮಹಿಳೆಯರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಿ ಶುಭ ಕೋರಲಾಯಿತು. ನೂರಾರು ಮಹಿಳೆಯರು ಆಗಮಿಸಿದ ಶ್ರೀನಿವಾಸ್ ಅವರಿಗೆ ಶುಭ ಹಾರೈಸಿ, ಸಿಹಿ ಪಡೆದು, ಉಡುಗೊರೆಗಳನ್ನು ಪಡೆದುಕೊಂಡರು.
ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ವಾಸಿಸುವ ಬಡಾವಣೆಗಳಲ್ಲಿ ಮಹಿಳೆಯರಿಗೆ ಪ್ರತಿ ವರ್ಷ ಬಾಗಿನ ನೀಡುವುದು, ದೀಪಾವಳಿಗೆ ಉಡುಗೊರೆ ನೀಡುವುದನ್ನು ಶ್ರೀನಿವಾಸ್ ಅವರು ನಿಯಮಿತವಾಗಿ ನಡೆಸುತ್ತಲೇ ಬಂದಿದ್ದಾರೆ.
ಇದೀಗ ಅವರ ಪುತ್ರ ಹಾಗೂ ಪದ್ಮನಾಭ ನಗರ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್, ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳು ತಲುಪುವಂತೆ ಮಾಡಲು ಯಶಸ್ವಿಯಾಗಿದ್ದು, ಫಲಾನುಭವಿಗಳ ಔತಣ ಕೂಡ ಹಾಗೂ ಉಡುಗೊರೆ ವಿತರಣೆ ಕಾರ್ಯಕ್ರಮ ನಡೆಸಿ, ನೂರಾರು ಜನರಿಗೆ ಉಡುಗೊರೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಎಲ್. ಶ್ರೀನಿವಾಸ್, ಪ್ರಮೋದ್ ಶ್ರೀನಿವಾಸ್ ಹಾಗೂ ಕ್ಷೇತ್ರದ ಕಾಂಗ್ರೆಸ್ ನಾಯಕರು, ವಾರ್ಡ್ ಅಧ್ಯಕ್ಷರು, ಮಾಜಿ ಬಿಬಿಎಂಪಿ ಸದಸ್ಯರು ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.