ಮೂರಂತಸ್ತಿನ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ :3 ನೇ ಮಹಡಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ನಿವಾಸಿಗಳು
ಮುಂಬೈ: ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಇಡೀ ಪ್ಲಾಟ್ ಗೆ ಹರಡಿದ್ದು, ಮೂರನೇ ಮಹಡಿಯಿಂದ ಜಿಗಿದು ಮೂವರು ಪ್ರಾಣ ಉಳಿಸಿಕೊಂಡಿರುವ ಘಟನೆ ಮುಂಬೈನ ಗಿರ್ಗಾವ್ ಪ್ಲಾಟ್ ನಲ್ಲಿ ನಡೆದಿದೆ.
ಚಿರಾ ಬಜಾರ್ ನಲ್ಲಿರುವ ಹೇಮರಾಜ್ ವಾಡಿಯಲ್ಲಿರುವ ಓಷಿಯಾನಿಕ್ ಕಟ್ಟಡದಲ್ಲಿ ಮುಂಜಾನೆ 3.20 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬೆಂಕಿ ಕೊಠಡಿಯನ್ನು ಆವರಿಸಿದ್ದು, ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಮೂವರು ಮಹಡಿಯಿಂದ ಜಿಗಿದಿದ್ದಾರೆ.
ಜಿಗಿದು ಪ್ರಾಣ ಉಳಿಸಿಕೊಂಡವರನ್ನು ಕಾರ್ತಿಕ್ ಮಾಝಿ(26), ದೀಪೆಂದರ್ ಮಂಡಲ್(19) ಮತ್ತು ಉಪ್ಪಲ್ ಮಂಡಲ್ ಎಂದು ಗುರುತಿಸಿದ್ದು, ಇವರೆಲ್ಲರನ್ನೂ ಪಕ್ಕದ ನಾಯರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸ ನಡೆಸಿದ್ದು, ಇದರಿಂದಾಗಿ ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸುವುದನ್ನು ನಿಯಂತ್ರಿಸಲಾಗಿದೆ. ಘಡನೆಗೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


