ಅಪರಾಧ ಸುದ್ದಿ

ಅಪ್ರಾಪ್ತೆಗೆ ವಿವಾಹ ಪ್ರಯತ್ನ: ಚಳ್ಳಕೆರೆಯಲ್ಲಿ ಮದುವೆಗೆ ತಡೆ ಹಾಕಿದ ಅಧಿಕಾರಿಗಳು

Share It

ಚಳ್ಳಕೆರೆ: ಅಪ್ರಾಪ್ತೆಗೆ ವಿವಾಹ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಮದುವೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದ ಕಲ್ಯಾಣಮಂಟಪವೊಂದರಲ್ಲಿ ಮದುವೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮದುವೆ ನಿಗದಿಯಾಗಿದ್ದ ವಧುವಿಗೆ 18 ವರ್ಷ ವಯಸ್ಸು ಪೂರ್ಣಗೊಂಡಿಲ್ಲ ಎಂಬ ಮಾಹಿತಿ ಅಧಿಕಾರಿಗಳಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಕಲ್ಯಾಣ ಮಂಟಪದ ಮೇಲೆ ದಾಳಿ ನಡೆಸಿ, ಮದುವೆಯನ್ನು ಪಡೆದಿದ್ದಾರೆ.

ಮದುವೆ ತಡೆದ ಅಧಿಕಾರಿಗಳು ಪೋಷಕರ ಮನವೊಲಿಸಿ, ಮದುವೆಯನ್ನು ಮುಂದೂಡುವಂತೆ ತಿಳಿಸಿದ್ದಾರೆ. ಅಧಿಕಾರಿಗಳ ಸೂಚನೆಗೆ ಸ್ಪಂದಿಸಿದ ಪೋಷಕರು ಸ್ವತಃ ಮದುವೆಯನ್ನು ಮುಂದೂಡಲು ಒಪ್ಪಿಕೊಂಡಿದ್ದಾರೆ.


Share It

You cannot copy content of this page