ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ರ ಸಾಲಿನ ‘ವಾರ್ಷಿಕ ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಮತ್ತು 2021ನೇ ಸಾಲಿನ ಪುಸ್ತತ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಸಾಹಿತಿಗಳಾದ ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ ಹಾಗೂ ತುಂಬಾಡಿ ರಾಮಯ್ಯ ಸೇರಿದಂತೆ 15 ಸಾಹಿತಿಗಳು ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಅವರು, ಹಿರಿಯ ಸಾಹಿತಿ ರಂಜಾನ್ ದರ್ಗಾ ಸೇರಿ 5 ಮಂದಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, 10 ಮಂದಿ ಸಾಹಿತ್ಯ ಶ್ರೀ ಪ್ರಶಸ್ತಿ, 17 ಜನರಿಗೆ 2021ನೆ ಪುಸ್ತಕ ಬಹುಮಾನ, 8 ಜನರಿಗೆ ದತ್ತಿ ಬಹುಮಾನ ಪುರಸ್ಕೃತರಾಗಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವಲ ಸೇವೆಯನ್ನು ಪರಿಗಣಿಸಿ, 2022ನೆ ಸಾಲಿನ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಗೆ ಸಾಹಿತಿಗಳಾದ ಆರ್.ಕೆ.ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗಡೆ, ರಂಜಾನ್ ದರ್ಗಾ, ತುಂಬಾಡಿ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ರೂ,50 ಸಾವಿರ ನಗದು ಬಹುಮಾನ ಒಳಗೊಂಡಿದೆ. ಈ ಬಾರಿ ಪ್ರಶಸ್ತಿಗಳಿಗೆ ವಿಭಾಗವಾರು ಸಾಹಿತಿಗಳನ್ನು ಗುರುತಿಸಿ, ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.
2022ರ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಬಂಜಗೆರೆ ಜಯಪ್ರಕಾಶ್, ರೂಮಿ ಹರೀಶ್, ಎಂ.ಜಿ. ಮಂಜುನಾಥ, ದಾಸನೂರು ಕೂಸಣ್ಣ, ರಾಜಶೇಖರ ಹತಗುಂದಿ, ಎಚ್.ಎನ್.ಆರತಿ, ಸಾರಿಕಾದೇವಿ ಕಾಳಗಿ, ಮಹೇಶ್ ಹರವೆ, ಅನಸೂಯ ಕಾಂಬ್ಳೆ ಹಾಗೂ ಚಲಂ ಹಾಡ್ಲಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಿಂದ ಐವರು, ಸೃಜನೇತರ ಸಾಹಿತ್ಯ ಕ್ಷೇತ್ರದಿಂದ ನಾಲ್ವರು ಹಾಗೂ ಸಾಹಿತ್ಯ ಪರಿಚಾರಿಕೆಗೆ ಸಂಬಂಧಿಸಿದಂತೆ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ರೂ.25 ಸಾವಿರ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಪುಸ್ತಕ ಬಹುಮಾನ: 2021ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ವಿವಿಧ 19 ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಚೇಮನಹಳ್ಳಿ ರಮೇಶ್‌ಬಾಬು-ರಾಗಿ ಕಾಳು(ಕಾವ್ಯ), ಡಾ.ಶೈಲೇಶ್ ಕುಮಾರ್ – ದಡ ಸೇರಿದ ಕನಸು (ನವ ಕವಿಗಳ ಪ್ರಥಮ ಸಂಕಲನ), ಡಾ.ಗಜಾನನ ಶರ್ಮ- ಚೆನ್ನ ಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ (ಕಾದಂಬರಿ), ಜಿ.ವಿ.ಆನಂದಮೂರ್ತಿ- ಗುಣಸಾಗರಿ ಮತ್ತು ಇತರೆ ಕತೆಗಳು (ಸಣ್ಣಕತೆ), ಮಹಾ ಬಿ.ಆರ್.ಪೊಲೀಸ್ ಪಾಟೀಲ- ಮಹಿಮ ಎಡೆಯೂರು ಸಿದ್ದಲಿಂಗ ಶಿವಯೋಗಿ (ನಾಟಕ), ಬಿ.ವಿ.ಭಾರತಿ- ಎಲ್ಲಿಂದಲೋ ಬಂದವರು (ಲಲಿತ ಪ್ರಬಂಧ), ಡಾ.ಎಸ್.ಬಿ. ಪದ್ಮಪ್ರಸಾದ್- ಬುದ್ಧ ಭಕ್ತರ ನಾಡಿನಲ್ಲಿ (ಪ್ರವಾಸ ಸಾಹಿತ್ಯ), ಡಾ.ಡಿ.ಡೊಮಿನಿಕ್- ಅಕ್ಕಯ್ (ಜೀವನ ಚರಿತ್ರೆ/ಆತ್ಮಕಥೆ) ಆಯ್ಕೆ ಮಾಡಲಾಗಿದೆ.
ಡಾ.ಎಚ್.ಎಸ್.ಸತ್ಯನಾರಾಯಣ – ಕಣೋಟ (ಸಾಹಿತ್ಯ ವಿಮರ್ಶೆ),ಸಿ.ವಿ.ಶೇಷಾದ್ರಿ ಹೊಳವನಹಳ್ಳಿ- ವಜ್ರದ ಕಿರೀಟ (ಮಕ್ಕಳ ಸಾಹಿತ್ಯ), ಡಾ.ವಿ.ಎಸ್.ಕಿರಣ್ – ಸೆರೆಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು (ವಿಜ್ಞಾನ ಸಾಹಿತ್ಯ), ಡಾ.ಕೆ.ಎಸ್.ನಾಗರಾಜ- ಸಂಕೇತ ವ್ಯಾಕರಣ ಮತ್ತು ಪದಕೋಶ (ಮಾನವಿಕ), ಡಾ.ಎ.ಎಸ್.ಪ್ರಭಾಕರ್- ಚಹರೆಗಳೆಂದರೆ ಗಾಯಗಳೂ ಹೌದು (ಸಂಶೋಧನೆ), ದಾದಾಪೀರ್ ಜೈಮನ್ – ಪರ್ದಾ ಮತ್ತು ಪಾಲಿಗಮಿ (ಅನುವಾದ 1 ಭಾರತೀಯ ಭಾಷೆ ಯಿಂದ ಕನ್ನಡಕ್ಕೆ), ಮುಜಾಫರ್ ಅಸಾದಿ- ಅಲ್ಪಸಂಖ್ಯಾತರುಮತ್ತು ಜಾತಿವ್ಯವಸ್ಥೆ (ಅಂಕಣ ಬರಹ/ ವೈಚಾರಿಕ ಬರಹ), ಡಾ.ಜಿ.ಕೃಷ್ಣಪ್ಪ- ವಚನ ದೀಪಿಕೆ (ಸಂಕೀರ್ಣ) ಮತ್ತು ಯಶಸ್ವಿನಿ ಕದ್ರಿ – ಊರು ಹೇಳದ ಕತೆ (ಲೇಖಕರ ಮೊದಲ ಸ್ವತಂತ್ರ ಕೃತಿ) ಬಹುಮಾನಕ್ಕೆ ಆಯ್ಕೆಯಾಗಿವೆ. ಈ ಪುಸ್ತಕ ಪ್ರಶಸ್ತಿಯು ತಲಾ 25 ಸಾವಿರ ರು.ನಗದು, ಫಲಕ, ಪ್ರಮಾಣ ಪತ್ರ ಒಳಗೊಂಡಿದೆ ಎಂದು ತಿಳಿಸಿದರು.
ವಿವಿಧ ದತ್ತಿ ಪ್ರಶಸ್ತಿಗಳು: ಅಕ್ಷಯ ಕಾಂತ ಬೈಲು- ಹದಿನೆಂಟರಿಂದ ಇಪ್ಪತ್ತೆಂಟರ ಕವಿತೆ ಗಳು (ಜಿ.ಶ್ರೀನಿವಾಸರಾಜುದತ್ತಿ ಬಹುಮಾನ), ಡಾ.ಎಚ್.ಜಿ.ಶ್ರೀಧರ್ – ಚಪಡ ಇದು ಅಕ್ಷರದ ಪಯಣ (ಚದುರಂಗ ದತ್ತಿ), ಸಹನಾ ಕಾಂತಬೈಲು- ಇದು ಬರಿ ಮಣ್ಣಲ್ಲ (ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ), ಡಾ.ನಾಗ ಎಚ್.ಹುಬ್ಬಿ ಹಾಕಿಮಾಂತ್ರಿಕ ಮೇಜರ್ ಧ್ಯಾನಚಂದ್ (ಸಿಂಪಿ ಲಿಂಗಣ್ಣ ದತ್ತಿ), ಡಾ.ಎಸ್.ಪ್ರಸಾದಸ್ವಾಮಿ- ಬೆಡಗು ಬಿನ್ನಾಣ(ಜಿ.ಶ್ರೀನಿವಾಸರಾಜು ದತ್ತಿ), ಸುಮಂ ಗಲಾ- ಸೆಬಾಸ್ಟಿಯನ್ ಆ್ಯಂಡ್ ಸನ್ಸ್ ಗುಂಡಪ್ಪ ಮತ್ತು ಶಾರದಮ್ಮ ದತ್ತಿ), ಅಕ್ಷಯ ಪಂಡಿತ್ – ಬಯಲಲಿ ತೇಲುವ ತಾನು (ಮಧು ರಚೆನ್ನ ದತ್ತಿ), ಡಾ.ಸುಶಿ ಕಾಡನಕುಪ್ಪೆ- ಅಸತ್ಯ ದ ಕೇಡು (ಬಿ.ವಿ.ವೀರಭದ್ರಪ್ಪ ದತ್ತಿ ಬಹು ಮಾನ) ಕೃತಿ ಆಯ್ಕೆಯಾಗಿದೆ. ಈ ಎಲ್ಲ ದತ್ತಿ ಪ್ರಶಸ್ತಿಗಳಿಗೆ ತಲಾ 10000 ರು.ನಗದು ಮತ್ತು ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಇರಲಿದೆ.