ರಾಜಕೀಯ ಸುದ್ದಿ

50 ಶಾಸಕರಿಗೆ ತಲಾ 50 ಕೋಟಿ ಆಫರ್ : ಆಪರೇಷನ್ ಕಮಲದ ಸ್ಫೋಟಕ ಮಾಹಿತಿ

Share It

ಬೆಂಗಳೂರು: ನನ್ನನ್ನು ಅಧಿಕಾರದಿಂದ ಕೆಲಗಿಳಿಸಲು ಪ್ರಯತ್ನ ನಡೆಯುತ್ತಿದ್ದು, 50 ಶಾಸಕರಿಗೆ ತಲಾ 50 ಕೋಟಿ ಆಮಿಷವೊಡ್ಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಫೋಟಕ ಆರೋಪ ಮಾಡಿದ್ದಾರೆ.

ಉಪಚುನಾವಣೆಯ ಮತದಾನ ಮುಕ್ತಾಯವಾದ ಬೆನ್ನಲ್ಲೇ ಇಂತಹದ್ದೊಂದು ಸ್ಫೋಟಕ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ, ಹಿಂದುಳಿದ ವರ್ಗದವನೊಬ್ಬ ಸಿಎಂ ಆಗಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ, ಆಪರೇಷನ್ ಮೂಲಕ ನಮ್ಮ ಸರಕಾರ ಅಸ್ಥಿರ ಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ನನ್ನನ್ನು ಮುಟ್ಟಿದರೆ ಕರ್ನಾಟಕದ ಜನತೆ ಸುಮ್ಮನೆ ಬಿಡುವುದಿಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯಿಲ್ಲದೆ ರಾಜಕಾರಣ ಮಾಡಿದ್ದೇನೆ. ಈಗ ನನಗೆ ಕಳಂಕ ಹತ್ತಿಸುವ ಪ್ರಯತ್ನ ನಡೆಯುತ್ತಿದೆ. ಇದರ ಜತೆಗೆ ಶಾಸಕರನ್ನು ಸೆಳೆದು ಸರಕಾರ ಪತನಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

updating…


Share It

You cannot copy content of this page