18ನೇ ಜಾಗತಿಕ ರಾಷ್ಟ್ರೀಯ ಸಾಧಕರಿಗೆ PRCI ಚಾಣಕ್ಯ ಪ್ರಶಸ್ತಿ ಪ್ರದಾನ

Share It


ಬೆಂಗಳೂರು: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI), ರವರು ಪ್ಯಾನ್-ಇಂಡಿಯಾ ಪ್ರೊಫೆಷನಲ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನಲ್ಲಿ ನಡೆದ 18ನೇ ಜಾಗತಿಕ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದವರನ್ನು, ಬೆಂಗಳೂರಿನಲ್ಲಿ ಚಾಣಕ್ಯ ಪ್ರಶಸ್ತಿ ಪುರಸ್ಕೃತರನ್ನು ಭಾನುವಾರ ಸನ್ಮಾನಿಸಲಾಯಿತು.

ಚಾಣಕ್ಯ ಪ್ರಶಸ್ತಿಗಳು, PRCI ನ ಪ್ರಮುಖ ಪ್ರಶಸ್ತಿಯಾಗಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸಂವಹನ ಅಭ್ಯಾಸಗಳನ್ನು ಹೊಂದಿರುವ ಪ್ರಭಾವಿ ಗೌರವ ವ್ಯಕ್ತಿಗಳಿಗೆ ವಾರ್ಷಿಕವಾಗಿ ನೀಡಲಾಗುತ್ತದೆ. ಕರ್ನಾಟಕಕ್ಕೆ 2024ನೇ ಸಾಲಿನಲ್ಲಿ ಅನೇಕ ಚಾಣಕ್ಯ ಪ್ರಶಸ್ತಿಗಳು ಲಭಿಸಿರುತ್ತದೆ.

ನಾಡೋಜ ಡಾ. ಎಸ್. ಷಡಕ್ಷರಿ, ಅಧ್ಯಕ್ಷರು, ರಮಣಶ್ರೀ ಹೊಟೇಲ್ ಮತ್ತು ಸಂಸ್ಥೆಗಳು, ಕೆ.ಎನ್. ವಾಸುದೇವ ಅಡಿಗ, ಅಧ್ಯಕ್ಷರು, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಪಾಕಶಾಲಾ ಹೋಟೆಲ್, ಡಾ. ಮಮತಾ ಬಿ.ಆರ್. ನಿವೃತ್ತ ಐಎಎಸ್ ಅಧಿಕಾರಿ, ಗಿರೀಶ್ ರಾವ್ ಹತ್ವಾರ್ (ಜೋಗಿ) ಪತ್ರಕರ್ತರು ಮತ್ತು ಲೇಖಕರು, ಇಂದುಧರ ಹೊನ್ನಾಪುರ, ಪತ್ರಕರ್ತರು, ಮನೋಹರ್, ಚಲನಚಿತ್ರ ನಿರ್ದೇಶಕರು, ಗುರುಕಿರಣ್ ಸಂಗೀತ ನಿರ್ದೇಶಕರು ಇವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಡಾ. ವುಡೆ ಪಿ. ಕೃಷ್ಣ, ಡಾ. ಸಿ. ಸೋಮಶೇಖರ್, ಸ್ವೀಜಲ್ ಪ್ರುಟಡೋ, ಮಿಸ್ ಗ್ಲೋಬಲ್ ಇಂಡಿಯಾ 2024, ರವಿಕಿರಣ್ ನಟ, ಎಂ.ಬಿ. ಜಯರಾಮ್, ಅಧ್ಯಕ್ಷರು PRCI, ಡಾ. ಕೆ.ಆರ್ ವೇಣುಗೋಪಾಲ್‌ ವಿಶ್ರಾಂತ ಕುಲಪತಿಗಳು, ಡಾ.ಬಿ.ಕೆ ರವಿ, ಕುಲಪತಿಗಳು, ಕೊಪ್ಪಳ ವಿಶ್ವವಿದ್ಯಾಲಯ, ಗೀತಾ ಶಂಕರ್ ರಾಷ್ಟ್ರೀಯ ಅಧ್ಯಕ್ಷರು PRCI ರವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.


Share It

You May Have Missed

You cannot copy content of this page