‘ಕರೆಂಟ್ ಶಾಕ್’ ಕೊಡಲು ಸಿದ್ಧತೆ ನಡೆಸಿದ ಸರಕಾರ: ದರ ಏರಿಕೆಗೆ ಸಿದ್ಧತೆ

electricity
Share It

ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬರೆ ಹಾಕಲು ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು, ಏ. 1 ರಿಂದ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ.

ಉಚಿತ ವಿದ್ಯುತ್ ಪೂರೈಕೆ ಸೇರಿ ಇನ್ನಿತರ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ದರ ಏರಿಕೆಗೆ ಸರಕಾರ ತೀರ್ಮಾನಿಸಿದೆ. ದರ ಏರಿಕೆ ಮಾಡುವಂತೆ ಕೆಇಆರ್ ಸಿ ಈ ಹಿಂದೆಯೇ ಮನವಿ ಮಾಡಿತ್ತು.

ಮನವಿಯ ಮೇರೆಗೆ ಸರಕಾರ ವಿದ್ಯುತ್ ದರ ಏರಿಕೆಗೆ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ, ದರ ಏರಿಕೆ ಬಹುತೇಕ ಖಚಿತ ಎಂಬ ಮಾಹಿತಿ ಲಭ್ಯವಾಗಿದೆ. 2025 ರ ಏ. 1 ರಿಂದ ದರ ಏರಿಕೆ ಅನ್ವಯವಾಗಲಿದೆ.


Share It

You cannot copy content of this page