ನಟ ದರ್ಶನ್ ಕೇಸ್ : SPP ಡೈನಾಮಿಕ್ ವಾದ ಮಂಡನೆ: ಇಂದೂ ಸಿಗದ ಜಾಮೀನು
ಬೆಂಗಳೂರು: ನಟ ದರ್ಶನ್ ಅವರ ಜಾಮೀನು ಅರ್ಜಿಗೆ ಸರಕಾರದ ಪರ ವಕೀಲರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಇಂದು ಕೂಡ ಜಾಮೀನು ಸಿಗಲಿಲ್ಲ.
ಎಸ್ ಪಿಪಿ ಪ್ರಸನ್ನ ಕುಮಾರ್, ದರ್ಶನ್ ಗೆ ಬೆನ್ನುಮೂಳೆ ಆಪರೇಷನ್ ಆಗದಿದ್ದರೆ, ಅವರಿಗೆ ಲಕ್ವಾ ಹೊಡೆಯುತ್ತದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದರು. ಆದರೆ, ಈವರೆಗೆ ಯಾವುದೇ ಆಪರೇಷನ್ ಮಾಡಿಸಿಲ್ಲ, ಅವರನ್ನು ಆಪರೇಷನ್ ಗೆ ಸಜ್ಜು ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ತಲೆ ಬಾಚ್ಕೊಳ್ಳಿ, ಪೌಡರ್ ಹಾಕೊಳ್ಳಿ ಎಂಬ ಹಾಡಿನಂತೆ ದರ್ಶನ್ ಅವರನ್ನು ಸಜ್ಜು ಮಾಡುತ್ತಿದ್ದಾರೆ. 2.25 ರೂಪಾಯಿಯ ಮಾತ್ರೆ ಕೊಟ್ಟರೆ ಸಾಕು ದರ್ಶನ್ ಬಿಪಿ ಕಡಿಮೆಯಾಗುತ್ತದೆ. ಆದರೆ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ನಾಟಕ ಮಾಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಸನ್ನ ಕುಮಾರ್ ವಾದಕ್ಕೆ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದರು. ವಾದ ವಿವಾದ ಆಲಿಸಿದ ನ್ಯಾಯಾಮೂರ್ತಿಗಳು ವಿಚಾರಣೆಯನ್ನು ಸೋಮುವಾರಕ್ಕೆ ಮುಂದೂಡಿದರು.