ಬೆಂಗಳೂರು: ಕೃಷಿಹೊಂಡದಲ್ಲಿ ಸ್ಫೋಟಕ ಸಿಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಅವರನ್ನು ಮಧುಗಿರಿ ತಾಲೂಕಿನ ಮಡಕಶಿರ ಪೊಲೀಸರು ಬಂಧಿಸಿದ್ದಾರೆ.
ಮಧುಗಿರಿಯ ಮಡಕಶಿರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟವೊಂದರಲ್ಲಿ ಡ್ರೋನ್ ಹಾರಿಸುವ ಸಲುವಾಗಿ ಪ್ರಯೋಗ ನಡೆಸುತ್ತಿದ್ದ ಡ್ರೋನ್ ಪ್ರತಾಪ್, ಕೆಲ ಸ್ಫೋಟಕಗಳನ್ನು ಬಳಸಿ ತಯಾರಿಸಿದ ಸಣ್ಣ ಪ್ರಮಾಣದ ಬಾಂಬ್ ಸಿಡಿಸಿದ್ದರು.
ಇಂತಹ ಸ್ಫೋಟಕ ಸಿಡಿಸುವುದು ಮತ್ತು ಅನಧಿಕೃತವಾಗಿ ತಯಾರಿಸುವುದು ಕಾನೂನು ಬಾಹಿರವಾಗಿದ್ದು, ಈ ಸಂಬಂಧ ಮಡಕಶಿರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡು, ಪ್ರತಾಪ್ ನನ್ನು ಬಂಧಿಸಿದ್ದಾರೆ.
ಡ್ರೋನ್ ಪ್ರತಾಪ್ ಸ್ಫೋಟಕ ಸಿಡಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಸ್ಫೋಟಕ ಸಿಡಿಸಲು ಅನುಮತಿ ಪಡೆಯದಿರುವ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದರು.
ವಿಡಿಯೋ ಮತ್ತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ