ಬೆಂಗಳೂರು: ಶಕ್ತಿ ಯೋಜನೆಯಡಿ ವಿವಿಧ ಸಾರಿಗೆ ನಿಗಮದ ಬಸ್ ಗಳಲ್ಲಿ 350 ಕೋಟಿ ಟಿಕೆಟ್ ಪಡೆದು ಮಹಿಳೆಯರು ಪ್ರಯಾಣಿಸಿದ್ದು, ಇದೊಂದು ಐತಿಹಾಸಿಕ ದಾಖಲೆಯಾಗಿದೆ.
ನಿಗಮವು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ʼಶಕ್ತಿ ಯೋಜನೆ – ಮಹಿಳಾ ಉಚಿತ ಪ್ರಯಾಣʼ ವನ್ನು ಜೂನ್-2023ರ 11ನೇ ದಿನಾಂಕದಂದು ಚಾಲನೆ ಮಾಡಿ ಜಾರಿಗೊಳಿಸಿದ್ದು ಮಹಿಳಾ ಸಬಲೀಕರಣದತ್ತ ಸರ್ಕಾರದ ದಿಟ್ಟ ನಡೆಗೆ ಪೂರಕವಾಗಿ ನಿಗಮವು ಸಾರಿಗೆ ಸೇವೆಯನ್ನು ಒದಗಿಸುತ್ತಿದೆ.
ಈ ಯೋಜನೆಯು ಜಾರಿಯಾದಾಗಿನಿಂದ ರಾಜ್ಯದ ಸುಮಾರು 350.90 ಕೋಟಿ ಮಹಿಳೆಯರು ಈ ಯೋಜನೆಯನ್ನು ಸದುಪಯೋಗ ಪಡೆದಿರುತ್ತಾರೆ. ಶಕ್ತಿ ಯೋಜನೆಯಡಿ ಇಂದಿನವರೆಗೂ (15.12.2024) ಒಟ್ಟು 601.84 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಈ ಪೈಕಿ 350.90 ಕೋಟಿ ಮಹಿಳಾ ಪ್ರಯಾಣಿಕರಾಗಿರುತ್ತಾರೆ.
ಅಂದರೆ, ಶೇ.58.30 ರಷ್ಟು ಮಹಿಳೆಯರು ಪ್ರಯಾಣಿಸಿರುತ್ತಾರೆ. ಮಹಿಳಾ ಪ್ರಯಾಣಿಕರ ಶೂನ್ಯ ಟಿಕೇಟ್ ಮೌಲ್ಯ ರೂ.8481.67 ಕೋಟಿಗಳಾಗಿರುತ್ತದೆ.