ಅಪರಾಧ ರಾಜಕೀಯ ಸುದ್ದಿ

ಪ್ರಚೋದಕಾರಿ ಭಾಷಣ : ನಾಜಿಯಾ ಖಾನ್ ವಿರುದ್ಧ ಪ್ರಕರಣ ದಾಖಲು

Share It

ಬೆಳಗಾವಿ: ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದ ಮೇರೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನಾಜಿಯಾ ಖಾನ್ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳೇಬಾವಿ ಗ್ರಾಮದ ಯದ್ದಲಬಾವಿ ಹಟ್ಟಿ ರಸ್ತೆಯ ಹುಲಿಯಮ್ಮನ ತೋಟದಲ್ಲಿ ನಡೆದ ಹಿಂದುಗಳ ಸ್ನೇಹ ಭೋಜನಕೂಟದಲ್ಲಿ ಅವರು ಪ್ರಚೋದರಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪಂತಬಾಳೇಕುಂದ್ರಿ ಗ್ರಾಮದ ಅಫ್ಸರ್ ಮಕ್ತು ಸಾಬ್ ಜಮಾದಾರ್ ದೂರು ನೀಡಿದ್ದಾರೆ.

ಮುಸ್ಲಿಂ ಮಹಿಳೆಯರು ಹಿಂದೂ ಧರ್ಮಕ್ಕೆ ಸೇರಿದರೆ ಹಿಂದು ಹುಡುಗನೊಂದಿಗೆ ವಿವಾಹ ಮಾಡಿ ಹನಿಮೂನ್ ಗೆ ಕಳಿಸುವುದಾಗಿ ನಾಜಿಯಾ ಖಾನ್ ಭಾಷಣ ಮಾಡಿದ್ದರು.


Share It

You cannot copy content of this page