ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್ ಗಿರಿ: ಭೀಪ್ ಸಾಗಾಟ ಮಾಡುತ್ತಿದ್ದ ಆರೋಪ
ಮಂಗಳೂರು: ಭೀಪ್ ಸಾಗಾಟ ಮಾಡುತ್ತಿದ್ದರು ಎಂದು ಆರೋಪಿಸಿ ಇಬ್ಬರು ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ, ಅಬ್ದುಲ್ ಸತ್ತಾರ್ ಮುಲ್ಲರಪಟ್ನ ತಮ್ಮ 11 ವರ್ಷದ ಮಗಳೊಂದಿಗೆ ಸುಮಾರು 19 ಕೆಜಿ ತೂಕದ ಗೋಮಾಂಸ ಹೊತ್ತುಕೊಂಡು ಬಜ್ಪೆ ಪೊಲೀಸ್ ಠಾಣೆಯ ಮಲಾಲಿ ನಾರ್ಲಪದವಿ ರಸ್ತೆಯಲ್ಲಿ ಯಾವುದೇ ದಾಖಲೆಗಳಿಲ್ಲದೆ ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ಎಡಪದವಿನ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯಕ್ (30) ಎಂಬವರು ಟಾಟಾ ಸುಮೋದಲ್ಲಿ ಬಂದು ಅವರನ್ನು ತಡೆದಿದ್ದಾರೆ. ಈ ವೇಳೆ ಬೈಕ್ ಕೆಳಗೆ ಬಿದ್ದು, ಸೈಲೆನ್ಸರ್‌ನಿಂದ ಬಾಲಕಿಯ ಕಾಲಿಗೆ ಗಾಯವಾಗಿದೆ. ಸತ್ತಾರ್ ಬೈಕನ್ನು ಬಿಟ್ಟು ಓಡಿಹೋಗಿದ್ದು, ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ.
“ಸುಮಿತ್ ಮತ್ತು ರಜತ್ ವಿಚಾರಣೆಗ ನಡೆಸಿದ್ದು, ಯಾವುದೇ ಬಿಲ್ ಇಲ್ಲದೆ ಗೋಮಾಂಸ ಸಾಗಿಸಿದ್ದಕ್ಕಾಗಿ ಅಬ್ದುಲ್ ಸತ್ತಾರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಸುಮಿತ್ ಮತ್ತು ರಜತ್ ವಿರುದ್ಧ ನೈತಿಕ ಪೊಲೀಸ್ ಗಿರಿ ನಡೆಸಿದ್ದಕ್ಲಾಗಿ ಎಫ್‌ಐಆರ್ ದಾಖಲಿಸಲಾಗಿದೆ.


