ಗರ್ಭಿಣಿ ಪತ್ನಿ, ತಾಯಿ ಮಕ್ಕಳನ್ನು ಕೊಂದವನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಬೆಂಗಳೂರು : ಗರ್ಭಿಣಿ ಪತ್ನಿ ಸೇರಿ ತಾಯಿ ಮತ್ತು ಮಕ್ಕಳನ್ನು ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮೈಸೂರು ನ್ಯಾಯಾಲಯ ಆದೇಶ ನೀಡಿದೆ.
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಚಾಮೇಗೌಡನ ಹುಂಡಿ ಗ್ರಾಮದಲ್ಲಿ 2021 ರ ಏಪ್ರಿಲ್ 28 ರಂದು ನಡೆದಿದ್ದ ಕೊಲೆಗಳ ವಿಚಾರಣೆ ನಡೆಸಿದ ಮೈಸೂರು ಜಿಲ್ಲಾ ನ್ಯಾಯಾಲಯ ಆರೋಪಿ ಮಣಿಕಂಠ ಸ್ವಾಮಿಗೆ ಮರಣದಂಡನೆ ವಿಧಿಸಿದೆ.
35 ವರ್ಷದ ಮಣಿಕಂಠಸ್ವಾಮಿ 9 ತಿಂಗಳ ಗರ್ಭಿಣಿ ಪತ್ನಿ ಗಂಗಾ, 65 ವರ್ಷದ ತಾಯಿ ಕೆಂಪಮ್ಮ ಹಾಗೂ ಎರಡು ವರ್ಷದ ಸಾಮ್ರಾಟ್ ಹಾಗೂ ನಾಲ್ಕು ವರ್ಷದ ರೋಹಿತ್ ನನ್ನು ಕುಡಿದ ಅಮಲಿನಲ್ಲಿ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ ಎನ್ನಲಾಗಿದೆ. ಪತ್ನಿ ಮೇಲಿನ ಅನುಮಾನದ ಕಾರಣಕ್ಕೆ ಕೊಲೆ ನಡೆದಿತ್ತು ಎಂದು ಹೇಳಲಾಗಿತ್ತು.
ಕೊಲೆ ಮಾಡಿ ನಂತರ ತಲೆ ಮರೆಸಿಕೊಂಡಿದ್ದ ಆರೋಪಿ ಮಣಿಕಂಠ ಸ್ವಾಮಿ ಅವರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮರಣದಂಡನೆ ವಿಧಿಸಿದೆ.