KSRTC ಯ ಮತ್ತೊಂದು ವಿಕ್ರಮ : ಹತ್ತನೇ ಬಾರಿಗೆಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ರೋಲಿಂಗ್ ಶೀಲ್ಡ್

IMG-20241207-WA0054
Share It


ಬೆಂಗಳೂರು: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತೀ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ಸಂಸ್ಥೆಯ ಪ್ರಶಸ್ತಿಯು ಕೆ ಎಸ್ ಆರ್ ಟಿ ಸಿ ಗೆ ಲಭಿಸಿರುತ್ತದೆ. ನಿಗಮವು ಸತತ 10ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಈ ಪ್ರಶಸ್ತಿಯನ್ನು ಗೌರವಾನ್ವಿತ ರಾಜ್ಯಪಾಲರಾದ ತಾವ ಥಾವರ್ ಚೆಂದ್ ಗೆಹ್ಲೋತ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಎಸ್.ಆರ್. ಉಮಾಶಂಕರ್, ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಮೇಜರ್ ಜನರಲ್ ಬಿಜಿ ಗಿಲಗಂಚಿ, ಎವಿಎಸ್ಎಮ್ (ನಿವೃತ್ತ) ಅವರು, ಕೆಎಸ್ಆರ್ ಟಿಸಿ ಅಧಿಕಾರಿಗಳಾದ ಡಾ. ಲತಾ ಟಿ.ಎಸ್. ಮಂಡಳಿ ಕಾರ್ಯದರ್ಶಿ/ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಮಂಜುಳಾ ಎಸ್. ನಾಯಕ್, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು, ಹೆಚ್.ಡಿ. ಗೌರಾಂಭ, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಅವರಿಗೆ ಪ್ರದಾನ ಮಾಡಿದರು.

ಈ ಸಮಾರಂಭದಲ್ಲಿ ಬ್ರಿಗೇಡಿಯರ್ ಎಮ್. ಬಿ. ಶಶಿಧರ್ (ನಿವೃತ್ತ) ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ರವರು ಉಪಸ್ಥಿತರಿದ್ದರು.


Share It

You cannot copy content of this page