ಉಪಯುಕ್ತ ಸುದ್ದಿ

ತಾತ್ತ್ವಿಕ ಪರಿಹಾರಗಳಿಗೆ ಹಣಕಾಸು ಒದಗಿಸಲು ಶ್ರೀರಾಮ್‌ ಗ್ರೀನ್‌ ಫೈನಾನ್ಸ್‌ ತಯಾರು

Share It

ಬೆಂಗಳೂರು: ಹಸಿರು ಹಣಕಾಸು ಪೋರ್ಟ್ಫೋಲಿಯೊವನ್ನು ಇಲೆಕ್ಟ್ರಿಕ್ ವಾಹನಗಳು, ಬ್ಯಾಟರಿ ಚಾರ್ಜಿಂಗ್ ಸ್ಟೇಶನ್‌ಗಳು, ನವೀಕರಣೀಯ ಶಕ್ತಿ ಉತ್ಪನ್ನಗಳು ಮತ್ತು ಪರಿಹಾರಗಳು, ಶಕ್ತಿಯ ಸಮರ್ಥ ಯಂತ್ರಗಳು ಇತ್ಯಾದಿ ಮೂಲಕ ನಿರ್ಮಿಸಲಾಗುತ್ತದೆ ಎಂದು ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಎಸ್. ಚಕ್ರವರ್ತಿ ಹೇಳಿದರು.

ಗ್ರೀನ್ ಶ್ರೀರಾಮ್‌ ಫಿನಾನ್ಸ್‌ ಲಾಂಚ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮ್ ಗ್ರೀನ್ ಫೈನಾನ್ಸ್, ಎಲೆಕ್ಟ್ರಿಕ್ ವಾಹನಗಳು (EVs), ಬ್ಯಾಟರಿ ಚಾರ್ಜಿಂಗ್ ಸ್ಟೇಷನ್ಗಳು ಸೇರಿದಂತೆ ಹಲವು ಯಂತ್ರೋಪಕರಣಗಳಿಗೆ ಹಣಕಾಸಿನ ನೆರವು ನೀಡಲಿದೆ. ಕಂಪನಿಯು ಮುಂದಿನ 3–4 ವರ್ಷ ಗಳಲ್ಲಿ ₹5,000 ಕೋಟಿಗಳ ಪ್ರಬಂಧಿತ ಆಸ್ತಿ (AUM) ಹೊಂದುವ ಗುರಿ ಹೊಂದಿದೆ ಎಂದು ಹೇಳಿದರು.

ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಕಾರ್ಯನಿರ್ವಹಣಾ ಉಪಾಧ್ಯಕ್ಷ ಉಮೇಶ್ ರೇವಂಕರ್ ಮಾತನಾಡಿ, “ಶ್ರೀರಾಮ್ ಹಸಿರು ಹಣಕಾಸು ವಿಭಾಗದ ಆರಂಭವು ಶ್ರೀರಾಮ್ ಫೈನಾನ್ಸ್ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಈ ಕಾರ್ಯಕ್ರಮವು, ಆರಂಭದಲ್ಲಿ ದೇಶಾದ್ಯಂತ ಇವಿ ಪೋರ್ಟ್‌ಫೋಲಿಯೊವನ್ನು ನಿರ್ಮಿಸಲಿದೆ. ಆರಂಭಿಕವಾಗಿ ಕರ್ನಾಟಕ, ಕೇರಳ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಗಮನವಹಿಸಲಿದೆ ಎಂದರು.


Share It

You cannot copy content of this page