ಟ್ರಂಪ್ ನಮ್ ಫ್ರೆಂಡು ಅಂತೀರಾ…ಈಗ ನೋಡಿ ನಮ್ಮ ದೇಶದವರನ್ನೇ ಹೊರಗೆ ಹಾಕಿದ್ದಾರೆ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಟಾಂಗ್
ಬೆಂಗಳೂರು: ಟ್ರಂಪ್ ನಮ್ಮ ಫ್ರೆಂಡ್ ಅಂತೀರಾ, ಮಾತೆತ್ತಿದರೆ ನಾನೇ ವಿಶ್ವಗುರು ಅಂತಿರಾ, ಈಗ ನೋಡಿದ್ರೆ, ನಮ್ಮವರನ್ನೆಲ್ಲ ಅವರು ಹೊರಗೆ ಹಾಕ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ
ಸಂಸದ್ ಭವನದ ಹೊರಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭೆ ಸದಸ್ಯರು, ಮೋದಿ ಸರಕಾರದ ನಡೆಯ ವಿರುದ್ಧ ಕಿಡಿಕಾರಿದರು. ಅಮೇರಿಕಾ ಸರಕಾರ ನಮ್ಮವರನ್ನೆಲ್ಲ ಕೆಟ್ಟದಾಗಿ ನಡೆಸಿಕೊಂಡು ಹೊರಗೆ ಕಳುಹಿಸುತ್ತಿದೆ. ನೀವ್ಯಾಕೆ ಟ್ರಂಪ್ ಜತೆ ಮಾತಾಡಬಾರದು ಎಂದು ತರಾಟೆಗೆ ತೆಗೆದುಕೊಂಡರು.
ಅಮೇರಿಕದಲ್ಲಿ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ, 18 ಲಕ್ಷ ವಲಸಿಗರನ್ನು ಭಾರತಕ್ಕೆ ಭಾರತಕ್ಕೆ ಕಳುಹಿಸಲು ತೀರ್ಮಾನಿಸಿದೆ. ಮೊದಲ ಭಾಗವಾಗಿ ಅಮೇರಿಕಾದ ಮಿಲಿಟರಿ ವಿಮಾನದ ಮೂಲಕ ಭಾರತದ ಅಮೃತಸರ ಕ್ಕೆ ಒಂದಿ ಬ್ಯಾಚಿನ ಜನ ಬಂದಿಳಿಸಿದ್ದಾರೆ. ಹೀಗಾಗಿ, ವಿಪಕ್ಷಗಳು ಆಡಳಿತ ಪಕ್ಷ ಬಿಜೆಪಿಯನ್ನೂ ತರಾಟೆಗೆ ತೆಗೆದುಕೊಂಡಿದೆ. ಮೋದಿ ನೇತೃತ್ವದ ಸರಕಾರದ ವೈಫಲ್ಯದಿಂದಲೇ ಇಷ್ಟೆಲ್ಲ ಸಮಸ್ಯೆಯಾಗಿದೆ ಎಂದು ಸಂಸದ್ ಭವನದ ಮುಂದೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ, ಪ್ರತಿಭಟಿಸಲಾಯಿತು.
ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತ್ರತ್ವದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೈರಾಮ್ ರಮೇಶ್ ಸೇರಿ ಅನೇಕ ಗಣ್ಯರುಆ್ರೆ


