ಕ್ರಿಪ್ಟೊ ಕರೆನ್ಸಿ ಹಗರಣ: ಕರ್ನಾಟಕ ಸೇರಿ ದೇಶದ 60 ಕಡೆ ಸಿಬಿಐ ರೇಡ್
ನವದೆಹಲಿ/ಬೆಂಗಳೂರು : ಅಂತಾರಾಷ್ಟ್ರೀಯ ಹಗರಣವಾಗಿರುವ ಕ್ರಿಪ್ಟೊ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಕರ್ನಾಟಕ ಸೇರಿದಂತೆ ದೇಶದ 60 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ರೇಡ್ ಮಾಡಿ ಶೋಧ ನಡೆಸುತ್ತಿದೆ.
ದೆಹಲಿ ಎನ್.ಸಿ.ಆರ್, ಪುಣೆ, ಚಂಡೀಗಢ, ನಾಂದೇಡ್, ಕೊಲ್ಲಾಪುರ, ಬೆಂಗಳೂರು ಸೇರಿದಂತೆ ದೇಶದ 60 ಕ್ಕೂ ಹೆಚ್ಚಿನ ನಗರಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಶಂಕಿತ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಗ್ಯೂ ಇಂದು ತಡರಾತ್ರಿಯವರೆಗೂ ದೇಶಾದ್ಯಂತ ಏಕಕಾಲಿಕ ಸಿಬಿಐ ರೇಡ್ ಅಂತ್ಯಗೊಂಡ ನಂತರ ಸಮಗ್ರ ಮಾಹಿತಿ ಸಿಗುತ್ತದೆ ಎಂದು ತಿಳಿದುಬಂದಿದೆ.


