ಹಾಸನ: ತೋಟದಲ್ಲಿ ಬೀದಿ ನಾಯಿಗಳು ನಡೆಸಿದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಮೃತಪಟ್ಟಿತಿವ ಘಟನೆ ತಿಪಟೂರು ತಾಲೂಕಿನ ಅಯ್ಯನಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಏಳು ವರ್ಷದ ಮಗಳು ನವ್ಯಾಳನ್ನು ತೋಟಕ್ಕೆ ಕರೆದೊಯ್ದಿದ್ದರು. ಆಗ ಏಕಾಏಕಿ ಐದಾರು ನಾಯಿಗಳು ಬಾಲಕಿಯ ಮೇಲೆ ದಾಳಿ ನಡೆಸಿದ್ದವು. ಭಾಗಶಃ ಕಿವುಡರಾಗಿದ್ದ ಬಾಲಕಿಯ ತಂದೆಗೆ ಆಕೆಯ ಕಿರುಚಾಟ ಕೇಳಿಸಿಯೇ ಇರಲಿಲ್ಲ ಎನ್ನಲಾಗಿದೆ.
ಬಾಲಕಿಯ ಚೀರಾಟ ಕೇಳಿ ಅಕ್ಕಪಕ್ಕದ ತೋಟದ ಜನರು ಬಂದು ನಾಯಿಯಿಂದ ಬಾಲಕಿಯನ್ನು ರಕ್ಷಣೆ ಮಾಡಿದ್ದರು. ಅನಂತರ ತಂದೆಯನ್ನು ತಟ್ಟಿ ಕರೆದಾಗಲೇ ಆತನಿಗೆ ಬಾಲಕಿ ಮೇಲೆ ನಾಯಿ ದಾಳಿ ನಡೆಸಿರುವ ಕುರಿತು ಮನವರಿಕೆಯಾಗಿತ್ತು.
ದಾಳಿಯಿಂದ ಬಾಲಕಿಯ ಮುಖ, ಕೈಕಾಲು ಹಾಗೂ ಹೊಟ್ಟೆಯ ಭಾಗದಲ್ಲಿ ಗಂಭೀರವಾಗಿ ಗಾಯಗಳಾಗಿದ್ದು, ಗ್ರಾಮಸ್ಥರು ತಕ್ಷಣವೇ ಬಾಲಕಿಯನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.