ಅಪರಾಧ ಸುದ್ದಿ

KSRTC ಬಸ್ ಪರಿಶೀಲನೆಗೆ ನಿಂತಿದ್ದ ವೇಳೆ ಟ್ಯಾಂಕರ್ ಹರಿದು ತನಿಖಾಧಿಕಾರಿ ಸಾವು

Share It

ಹಾಸನ: KSRTC ಬಸ್ ಪರಿಶೀಲನೆಗೆ ರಸ್ತೆ ಬದಿ ನಿಂತಿದ್ದ ತನಿಖಾಧಿಕಾರಿಯ ಮೇಲೆ ಟ್ಯಾಂಕರ್ ಹರಿದು, ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಬಳಿ ನಡೆದಿದೆ.

ಹಾಸನ ವಿಭಾಗದ ಹೊಳೇನರಸೀಪುರ ಡಿಪೋ ಚೆಕ್ಕಿಂಗ್ ಇನ್ಸ್ ಪೆಕ್ಟರ್ ಶಕುನಿಗೌಡ ಮೃತರು ಎಂದು ಹೇಳಲಾಗಿದೆ. ಇವರು ಸಕಲೇಶಪುರ ಬಳಿ ಬಸ್ ಟಿಕೆಟ್ ಪರಿಶೀಲನೆ ಮಾಡಲು ತೆರಳಿದ್ದ ವೇಳೆ ಬಸ್ ನಿಲ್ಲಿಸಿ, ಹತ್ತಲು ಹೋದಾಗ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ತನಿಖಾಧಿಕಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತರು ಅರಕಲಗೂಡು ಮೂಲದವರು ಎಂದು ಹೇಳಲಾಗಿದೆ. ಅವರಿಗೆ 52 ವರ್ಷವಾಗಿತ್ತು ಎನ್ನಲಾಗಿದೆ.


Share It

You cannot copy content of this page