ಸೂರ್ಯ ಕಿರಣದಲಿ ಭೂತಕನ್ನಡಿ ನಡುವೆ ಮೂಡಿದ ರಾಷ್ಟ್ರಪತಿ ಭಾವಚಿತ್ರ: ಉಡುಪಿ ಕಲಾವಿದನಿಗೆ ಮೆಚ್ಚುಗೆ

Oplus_131072

Oplus_131072

Share It


ಮಂಗಳೂರು: ಸೂರ್ಯನ ಕಿರಣಗಳನ್ನು ಭೂತಗನ್ನಡಿಯೊಳಗೆ ಹಾದು ಹೋಗುವಂತೆ ಮಾಡಿ ಅದರಿಂದ ರಚಿಸುವ ಸುಂದರವಾದ ಕಲಾಕೃತಿಗಳ ಮೂಲಕವೇ ಹೆಸರು ಮಾಡಿರುವ ಉಡುಪಿಯ ಕಲಾವಿದ ಇದೀಗ ರಾಷ್ಟ್ರಪತಿಗಳ ಮೆಚ್ಚುಗೆ ಗಳಿಸಿದ್ದಾರೆ

ಉಡುಪಿ ಮೂಲದ ಮೂಡುಬೆಳ್ಳೆ ಗ್ರಾಮದ ಮಹೇಶ್ ಮರ್ಣೆ ಎಂಬ ಕಲಾವಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚಿತ್ರವನ್ನು ಮರದ ಕಟ್ಟಿಗೆಯ ಮೇಲೆ ಸೂರ್ಯನ ಕಿರಿಗಳಿಗೆ ಭೂತಗನ್ನಡಿಯನ್ನು ಬಳಸಿ, ಸುಟ್ಟು ಬಿಡಿಸಿದ್ದಾರೆ. ಇದರು ರಾಷ್ಟ್ರಪತಿಗಳ ಗಮನ ಸೆಳೆದಿದೆ.

ಕಲಾವಿದನ ಈ ಕೈಚಳಕಕ್ಕೆ ಸ್ವತಃ ರಾಷ್ಟ್ರಪತಿಗಳ ಕಚೇರಿಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಲಾಕೃತಿ ಬಿಡಿಸಲು ಮಹೇಶ್, ಸತತ ಎರಡೂವರೆ ಗಂಟೆಗಳ ಕಾಲ ಬಿಸಿಲಿನಲ್ಲಿ ಕಳೆದರು. ಇದಕ್ಕೆ ಸಾರ್ಥಕವೆಂಬಂತೆ ಅದ್ಭುತ ಕಲಾಕೃತಿ ಮೂಡಿದ್ದು, ರಾಷ್ಟ್ರಪತಿಗಳ ಮೆಚ್ಚುಗೆ ಗಳಿಸಿರುವುದು ವಿಶೇವವಾದ ಸಂಗತಿಯಾಗಿದೆ.

ಎಲೆಗಳ ಮೇಲೆ ವಿಭಿನ್ನ ಕಲಾಕೃತಿಗಳನ್ನು ಬಿಡಿಸುವ ಮೂಲಕ ಲಿಮ್ಕಾ ದಾಖಲೆ ಮಾಡಿರುವ ಮಹೇಶ್, ಮೊದಲ ಬಾರಿಗೆ ಬಿಸಿಲಿನಿಂದ ಭೂತಗನ್ನಡಿಯ ಮೂಲಕ ಚಿತ್ರ ಬಿಡಿಸುವ ಪ್ರಯೋಗ ಮಾಡಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿದ್ದು, ರಾಷ್ಟ್ರಪತಿಗಳ ಕಚೇರಿಯಿಂದ ಧನ್ಯವಾದ ಸಮರ್ಪಣೆ ಯಾಗಿದೆ.

ಎಲೆಗಳ ಮೇಲೆ ಡಾ.ಬಿ.ಆರ್. ಅಂಬೇಡ್ಕರ್, ಸಾಲುಮರದ ತಿಮ್ಮಕ್ಕ, ಸಚ್ಚಿನ್ ತೆಂಡೂಲ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರ ಚಿತ್ರಗಳನ್ನು ಬಿಡಿಸುವ ಮೂಲಕ ಮನೆಮಾತಾಗಿದ್ದಾರೆ. ಇದೀಗ ರಾಷ್ಟ್ರಪತಿಗಳ ಚಿತ್ರದ ಮೂಲಕ ಮತ್ತಷ್ಟು ಖ್ಯಾತರಾಗಿದ್ದಾರೆ ಎನ್ನಬಹುದು.


Share It

You cannot copy content of this page