ರಾಜಕೀಯ ಸುದ್ದಿ

ಡ್ರಗ್ಸ್ ಹಾವಳಿ ತಡೆಗೆ ಕಠಿಣ ಕ್ರಮಕ್ಕೆ ಮುಂದಾದ ಸರಕಾರ: ಹತ್ತು ವರ್ಷ ಜೈಲು, ಜಾಮೀನು ರಹಿತ ಬಂಧನ

Share It

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಜಾಸ್ತಿಯಾಗಿದೆ ಎಂಬ ಕುರಿತು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜತೆಗೆ ಸಭೆ ನಡೆಸಲಾಯಿತು.

ವರದಿಯಾದ ಡ್ರಗ್ಸ್ ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿಯೇ ಶೆ. 50 ರಷ್ಟು ದಾಖಲಾಗಿದ್ದರೆ, ಮಂಗಳೂರಿನಲ್ಲಿ ಶೇ‌ 22 ರಷ್ಟು ಪ್ರಕರಣಗಳು ವರದಿಯಾಗಿವೆ.

ತಡೆಯುವ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ.

ಡಾ. ವಿಶಾಲ್ ರಾವ್ ಅವರು ಸಮಿತಿ ಸದಸ್ಯರಾಗಿದ್ದು, ಅವರ ಸಲಹೆ ಪಡೆದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸರಕಾರ ತೀರ್ಮಾನಿಸಿದೆ.

ಗೃಹಸಚಿವರ ನೇತೃತ್ವದ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುತ್ತದೆ. ಆರೋಗ್ಯ ಸಚಿವರು, ಶಿಕ್ಷಣ ಸಚಿವರು ಸದಸ್ಯರಾಗಿರುತ್ತಾರೆ. ಆಗಾಗ ಸಮಿತಿ ಸಭೆ ನಡೆಸಿ, ಡ್ರಗ್ಸ್ ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತದೆ.

ಪೊಲೀಸ್ ಠಾಣೆಯಲ್ಲಿ ಆಫೀಸರ್ ಗೆ ಗೊತ್ತಿಲ್ಲದೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ, ಅವರಿಗೆ ಡಿವೈಎಸ್ ಪಿ, ಎಸ್ ಪಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ.

ಕಾನೂನಿಗೆ ತಿದ್ದುಪಡಿ ತಂದು ಜಾಮೀನುರಹಿತ ಬಂಧನ ಜಾರಿಗೊಳಿಸುವುದು ಹಾಗೂ ಕನಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅಗತ್ಯ ಕಾನೂನು ತರಲು ತೀರ್ಮಾನಿಸಲಾಗಿದೆ.

ಎನ್ ಸಿಸಿ, ಎನ್ಎಸ್ ಎಸ್ ಮಾದರಿಯಲ್ಲಿ ಸ್ಟೂಡೆಂಟ್ ಪೊಲೀಸಿಂಗ್ ಮಾಡಲು ತೀರ್ಮಾನಿಸಲಾಗಿದೆ. ರೆಸಿಡೆನ್ಸ್ ಅಸೋಸಿಯೇಷನ್ ಗಳನ್ನು ಒಳಗೊಂಡು ಕಮಿಟಿ ರಚಿಸಲು ತೀರ್ಮಾನಿಸಲಾಗಿದೆ.

ವಿಶೇಷ ನ್ಯಾಯಾಲಯಗಳನ್ನು ತೆರೆದು ಬೇಗನೆ ವಿಚಾರಣೆ ಮುಗಿಸಿ, ಶಿಕ್ಷೆಯಾಗುವಂತೆ ಮಾಡಲು ತೀರ್ಮಾನಿಸಲಾಗಿದೆ. ಮಾಸಿಕ ಸಭೆ ನಡೆಸಿ ವರದಿ ನೀಡುವಂತೆ ಕಮಿಟಿಗೆ ಸೂಚಿಸಲಾಗಿದೆ.

ಡ್ರಗ್ಸ್ ಬಳಕೆಯಿಂದ ಕ್ರಿಮಿನಲ್ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ, ಅದನ್ನು ತಡೆಯಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

ತಡೆಯಲು ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮ: ಡ್ರಗ್ಸ್ ಪ್ರಕರಣ ತಡೆಯಲು ವಿಫಲವಾಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಧಿಕಾರಿಗಳ ಅಮಾನತು ಮಾಡುವುದು ಸೇರಿ ವಿಫಲವಾದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ.

ವರ್ಷ ಸ್ಥಳೀಯರು ವಿದೇಶಿಗರು
2022 7731 123
2023 8016 105
2024 1021 21

updating…


Share It

You cannot copy content of this page