ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಫೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟಿನಲ್ಲಿ ನಡೆಯಿತು.
ಬಿ.ಎಸ್. ಯಡಿಯೂರಪ್ಪ ಪರ ವಾದ ಮಂಡನೆ ಮಾಡಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಯಡಿಯೂರಪ್ಪ ಅವರು, ತಮ್ಮ ಮನೆಗೆ ಬಂದ ಸಂತ್ರಸ್ತೆಗೆ ಧೈರ್ಯ ತುಂಬಿರುವುದಾಗಿ ಹೇಳಿದ್ದಾರೆ. ಅವರಿಗೆ ಲೈಂಗಿಕ ದೌರ್ಜನ್ಯ ನಡೆಸುವ ಉದ್ದೇಶ ಅವರಿಗಿರಲಿಲ್ಲ. ಹೀಗಾಗಿ, ಪ್ರಕರಣ ರದ್ದುಗೊಳಿಸಿ ಎಂದು ಮನವಿ ಮಾಡಿಕೊಂಡರು.
ಸಂತ್ರಸ್ತೆಯ ಪರ ವಾದ ಮಂಡನೆ ಮಾಡಿದ ಸರಕಾರದ ಪರ ವಕೀಲ ರವಿವರ್ಮ ಕುಮಾರ್, ಸಂತ್ರಸ್ತೆಯನ್ನು ಎದುರಿಸಿ, ಫೇಸ್ ಬುಕ್ ವಿಡಿಯೋ ಡಿಲೀಟ್ ಮಾಡಲಾಗಿದೆ. ಆಕೆಯನ್ನು ಮನೆಗೆ ಕರೆಸಿಕೊಂಡು, ಚೆಕ್ ಮಾಡಿದ್ದೇನೆ, ಏನು ಬೇಕಾದ್ರೂ ಸಪೋರ್ಟ್ ಮಾಡುತ್ತೇನೆ ಎಂದಿದ್ದಾರೆ. ಹೀಗಾಗಿ, ಪ್ರಕರಣದಲ್ಲಿ ಅವರ ಪಾತ್ರ ಇರುವುದು ಕಂಡುಬರುತ್ತದೆ. ಹೀಗಾಗಿ, ಪ್ರಕರಣ ರದ್ದು ಮಾಡುವುದು ಸರಿಯಲ್ಲ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿಡಿಯೋ ದಲ್ಲಿ ಯಡಿಯೂರಪ್ಪ ಅವರ ದ್ವನಿಯಿದೆ ಎಂದು ಜಡ್ಜ್ ಹೇಳಿದ್ದು, ಇದು ಅಸ್ಪಷ್ಟವಾಗಿದ್ದು, ಪ್ರಕರಣದ ನಂತರ ಸಾಕಷ್ಟು ಬಾರಿ ಸಂತ್ರಸ್ತೆಯ ತಾಯಿ ಯಡಿಯೂರಪ್ಪ ಅವರ ಮನೆಗೆ ಬಂದಿದ್ದಾರೆ. ಹೀಗೆ ಬರಲು ಹೇಗೆ ಸಾಧ್ಯ? ಎಂದು ಸಿ.ವಿ.ನಾಗೇಶ್ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರವಿವರ್ಮ ಕುಮಾರ್, ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರ ಮನೆಗೆ ಬಂದಿರುವುದನ್ನು ರಿಜಿಸ್ಟ್ರಾರ್ ನಲ್ಲಿ ತಿದ್ದಲಾಗಿದೆ. ಮನೆಯ ವಿಸಿಟ್ ಬುಕ್ ನಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ, ಆರೋಪವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ವಾದಿಸಿದರು.