ವರದಿ ನಾರಾಯಣಸ್ವಾಮಿ ಸಿ.ಎಸ್
ಹೊಸಕೋಟೆ: ಹೊಸಕೋಟೆ ತಾಲೂಕಿನ ಬೇಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 2007/ 2008ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ರಾಮಾಂಜಿನಪ್ಪ ಹಾಗೂ ವೆಂಕಟೇಗೌಡ ತಂಡದವರಿಂದ ಆಯೋಜಿಸಲಾಗಿತ್ತು..
ಈ ಕಾರ್ಯಕ್ರಮವನ್ನು ಗುರು ವೃಂದದವರ ಸಾನಿದ್ಯದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರವನ್ನು ಉದ್ದೇಶಿಸಿ ಶಿಕ್ಷಕರಾದ ಮಹೇಶ್ ಮಾತನಾಡಿ ಈ ರೀತಿಯ ಕಾರ್ಯಕ್ರಮಗಳು ಶಾಲೆಯ ಅಭಿವೃದ್ದಿಗೆ ಮಾದರಿ ಶಿಕ್ಷಣವನ್ನು ಬೆಳೆಸುವ ಕಾರ್ಯಕ್ಕೆ ಸ್ಪೂರ್ತಿ ತುಂಬುವಂತ ಕಾರ್ಯಗಳಾಗಿವೆ ಸದಾ ಶಾಲೆಯನ್ನು ಶಿಕ್ಷಕ ವೃಂದವನ್ನು ಅಭಿನಂದಿಸುವ ಕಾರ್ಯಕ್ರಮಗಳು ಮುಂದಿನ ಯುವ ಪೀಳಿಗೆಗಳಿಗೆ ಮಾದರಿಯಾಗುತ್ತವೆ ಎಂದರು.
ನಮ್ಮ ಕೈಯಲ್ಲಿ ಕಲಿತ ಇದೆ ಶಾಲೆಯಲ್ಲಿ ಓದಿ ದೊಡ್ಡವರಾಗಿ ಶಾಲೆಯಲ್ಲಿ ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಖುಷಿ ಆದರೆ ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಇದ್ದು ಕಲಿತ ಶಾಲೆಯನ್ನು ಹಾಗೂ ಶಿಕ್ಷಕರನ್ನು ಗೌರವಿಸುವ ನೆನಪಿಸುವ ಈ ಕಾರ್ಯವು ಶಿಕ್ಷಕರ ಕಾರ್ಯಕ್ಕೆ ಸಾರ್ಥಕತೆ ಮೆರೆಗೂ ತಂದುಕೊಟ್ಟಿತು ಎಂದರು.
ಶಿಕ್ಷಕಿ ಭಾರತಿ ಮಾತನಾಡಿ ಈ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸಿದಂತಾಯಿತು ಎಂದರು.
ಹಳೆಯ ವಿದ್ಯಾರ್ಥಿಗಳು ಬಾಲಕೃಷ್ಣ,ಕೃತೀಕ್, ಪ್ರಪುಲಾ, ಶಿಲ್ಪಾ, ಪ್ರತಿಭಾ,ಇತರ ವಿದ್ಯಾರ್ಥಿಗಳು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಬಲಿಷ್ಠವಾದುದು. ಗುರುಬಲ ಬಾಲ್ಯದಲ್ಲಿ ತುಂಟತನ,ಅಜ್ಞಾನ,ಅಶಿಸ್ತಿನಿಂದ ಇರುವ ಮಕ್ಕಳನ್ನು ಒಂದು ಹತೋಟಿಗೆ ತಂದು ವಿದ್ಯೆ ಕಲಿಸುವ ಎಲ್ಲ ಗುರುಗಳಿಗೂ ನಮನ ಅವರ ತಾಳ್ಮೆ ಇರದೇ ಹೋಗಿದ್ದರೆ ನಮಗೆ ವಿದ್ಯೆಯ ಗಂಧವೇ ಇರುತ್ತಿರಲಿಲ್ಲ. ಅಸಭ್ಯ ಸಂಸ್ಕೃತಿ ಜೀವನದ ಭಾಗವಾಗುತ್ತಿರಿಲ್ಲ. ಅಲ್ಲವೆ. ಆದರೆ ಪ್ರಸ್ತುತ ಕಾಲ ಬದಲಾಗಿದೆ. ಜನರ ಮನೋಭಾವವೂ ಬದಲಾಗಿದೆ. ವಿದ್ಯೆ ಕಲಿಸುವ ಗುರು ಒಂದೇಟು ಹೊಡೆದರೆ ದೊಡ್ಡ ಕೋಲಾಹಲವೇ ನಡೆಯುತ್ತದೆ. ಆದರೆ ಒಂದು ಸುಂದರ ಶಿಲ್ಪಿಯ ಉಳಿ ಸುತ್ತಿಗೆಯ ಹಲವು ಪೆಟ್ಟುಗಳು ಬೀಳಲೇಬೇಕು.
ಶಾಲೆಯಲ್ಲಿ ಕಲಿತಿರುವ ಸುಕ್ಷಣಗಳನ್ನು ಮೆಲಕು ಹಾಕುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಕರೊಂದಿಗೆ ಶಾಲೆಯಲ್ಲಿ ನಡೆದ ಸಿಹಿ ಕಹಿ ವಿಷಯಗಳನ್ನು ಮುಕ್ತ ಮನಸ್ಸಿನಿಂದ ವಿದ್ಯಾರ್ಥಿಗಳು ತಮ್ಮೆಲ್ಲಾ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ಮೂಲಕ ಶಾಲೆಯ ನೆನಪುಗಳನ್ನು ಮರುಕಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಹಳೆಯ ವಿದ್ಯಾರ್ಥಿಗಳಾದ ಚನ್ನಬಸವಯ್ಯ ಹಾಗೂ ರೂಪ ಎಂ ಆರ್ ಅವರು ಅಚ್ಚುಕಟ್ಟಾಗಿ ಹಾಗೂ ಎಲ್ಲರ ಮನ ಮುಟ್ಟುವಂತೆ ಮಾತನಾಡಿ ನಡೆಸಿಕೊಟ್ಟರು, ಕಾರ್ಯಕ್ರಮದ ನಂತರ ಶುಚಿ-ರುಚಿಯಾದ ಭೋಜನವನ್ನು ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಸಂಭ್ರಮಾಚರಣೆಯಿಂದ ಕಾರ್ಯಕ್ರಮ ಜರುಗಿತು. 20ವರ್ಷಗಳ ನಂತರ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ತಮಗೆ ಪಾಠ ಕಲಿಸಿಕೊಟ್ಟ ಜೀವನ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸಿದ ಹಳೆ ವಿದ್ಯಾರ್ಥಿ ಗಳು ತಮ್ಮ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿದರು.
ಹೀಗೊಂದು ಹೃದಯ ಸ್ಪರ್ಶ ಕಾರ್ಯಕ್ರಮವೊಂದಕ್ಕೆ ಹೊಸಕೋಟೆ ತಾಲೂಕಿನ ಬೇಗೂರು ಪ್ರೌಢಶಾಲೆಯ 2007 – 2008ರ ಎಸ್‌ಎಸ್‌ಎಲ್ಸಿ ಬ್ಯಾಚ್ ಹಳೆ ವಿದ್ಯಾರ್ಥಿ ಗಳು ಭಾನುವಾರದಂದು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಾಕ್ಷಿಯಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಹೇಶ್, ಮುಖ್ಯೋಪಾಧ್ಯಾಯರು ಭಾರತಿ, ಶ್ರೀಮಂತಿನಿ, ಶಿವಾನಂದ ಹರ್ಕುಣಿ, ಪಿ ಜೆ ದಿನೇಶ್, ಎಂ ರಾಜೇಶ್ ಅತಿಥಿಗಳಾಗಿ ಹಾಗೂ ಶಾಲೆಯ ಎಲ್ಲಾ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೋಟ್
ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ..ಅತಿಥಿ ದೇವೋ ಭವ ಎನ್ನುತ್ತದೆ ನಮ್ಮ ಸಂಸ್ಕೃತಿ ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ ಶ್ರದ್ಧಾಪೂರ್ವಕ ನಂಬಿಕೆ ನಮ್ಮದು. ಬದುಕಿನ ಪ್ರಮುಖ ಘಟಗಳಲ್ಲಂತೂ ಮಾರ್ಗದರ್ಶಕರಾಗಿ ಗುರುವಿನ ಸಹಾಯ ಬೇಕೇ ಬೇಕು.
– ಸಂತೋಷ್,
ಹಳೆಯ ವಿದ್ಯಾರ್ಥಿ ಚೋಳಪ್ಪನಹಳ್ಳಿ