ದೆಹಲಿ: ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿರುವ ಆಮ್ ಆದ್ಮಿ ಪಕ್ಷ ತನ್ನೆಲ್ಲಾ 22 ಚುನಾಯಿತ 22 ಶಾಸಕರನ್ನು ದೆಹಲಿಯಲ್ಲಿಂದು ಶಾಸಕಾಂಗ ಪಕ್ಷದ ಸಭೆಗೆ ಆಹ್ವಾನಿಸಿತ್ತು.
ಅದರಂತೆ ಶಾಸಕಾಂಗ ಪಕ್ಷದ ಸಭೆಗೆ ಹಾಜರಾದ ಎಎಪಿ ಶಾಸಕರು ನಿಕಟಪೂರ್ವ ಸಿಎಂ ಅತಿಶಿ ಮರ್ಲೆನಾ ಅವರನ್ನು ವಿರೋಧ ಪಕ್ಷದ ನಾಯಕಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿತು.
ಅತಿಶಿ ಮರ್ಲೆನಾ ಅವರು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ರಾಜೀನಾಮೆ ಬಳಿಕ ಸಿಎಂ ಆಗಿ 3 ತಿಂಗಳು ಆಡಳಿತ ನಡೆಸಿ ಪುನಃ ಶಾಸಕಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದರು.