ಬೆಂಗಳೂರು: 15ನೇ ಏರೋ ಇಂಡಿಯಾ ವೇಳಪಟ್ಟಿ ಪ್ರಕಟವಾಗಿದ್ದು, 2025ರ ಫೆಬ್ರವರಿ 10ರಿಂದ14ರವರೆಗೆ ನಡೆಯಲಿದೆ.
ಏಷ್ಯಾ ಖಂಡದಲ್ಲೇ ಅತಿದೊಡ್ಡ ವೈಮಾನಿಕ ಪದರ್ಶನ ಇದಾಗಿದ್ದು, ರಕ್ಷಣಾ ಇಲಾಖೆ, ರಕ್ಷಣಾ ಉತ್ಪಾದನಾ ಇಲಾಖೆ ಸಹಯೋಗದಲ್ಲಿ ಪ್ರತಿ 2ವರ್ಷಕ್ಕೊಮ್ಮೆ ಯಲಹಂಕದ ವಾಯುನೆಲೆಯಲ್ಲಿ ಪ್ರದರ್ಶನ ನಡೆಯಲಿದೆ.
ಕಳೆದ ಪ್ರದರ್ಶನವನ್ನು 6.5ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಹಾತಾಟ ನಡೆಸಿದ ಅಮೆರಿಕದ ಕ್ಷಿಪಣಿ ಎಫ್-35ಪ್ರಮುಖ ಅಕರ್ಷಣೆಯಾಗಿತ್ತು ಎಫ್-16, ರೆಫೇಲ್, ತೇಜಸ್, ಸೂರ್ಯಕಿರಣ, ಸಾರಂಗ್ ಹೆಲಿಕಾಪ್ಟರ್ ಸೇರಿ 67 ಏರ್ ಕ್ರಾಪ್ಟ್ ಪ್ರದರ್ಶನಕ್ಕೆ ಇಡಲಾಗಿತ್ತು. ಎಚ್ ಎಎಲ್ ನಿರ್ಮಿತ ಯುದ್ದ ವಿಮಾನ ಶಕ್ತಿ ಪ್ರದರ್ಶನ ಮಾಡಿತ್ತು.