ರಾಜ್ಯದಲ್ಲಿ ಮೈತ್ರಿಗೆ ಮುಖಭಂಗ: ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು
ಬೆಂಗಳೂರು: ರಾಜ್ಯದ ಮತದಾರರು ಮೈತ್ರಿಕೂಟಕ್ಕೆ ಮುಖಭಂಗ ಮಾಡಿದ್ದು ಆಡಳಿತಾರೂಢ ಕಾಂಗ್ರೆಸ್ ಗೆ ಗೆಲುವಿನ ಕೊಡುಗೆ ಕೊಟ್ಟಿದ್ದಾರೆ. ಆ ಮೂಲಕ ಗ್ಯಾರಂಟಿ ಪರ ತಮ್ಮ ಒಲವು ಎಂಬುದನ್ನು ಸಾಭೀತು ಮಾಡಿದ್ದಾರೆ.
ಬಹುತೇಕ ಸಮೀಕ್ಷೆಗಳು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಾಣಲಿದೆ ಎಂದು ಸಾರಿದ್ದವು. ಆದರೆ, ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸತತ ಮೂರನೇ ಚುನಾವಣೆಯಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಸೋಲಿನ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರ ರಾಮನಗರ ಮೇಲಿನ ಹಿಡಿತ ಸಡಿಲಗೊಂಡಿದೆ. ಡಿಕೆಶಿ ಸಹೋದರರು ತಮ್ಮ ಲೋಕಸಭೆ ಸೋಲಿನ ಕಹಿಯನ್ನು ಮರೆಯುವಂತಹ ಗೆಲುವು ಸಿಕ್ಕಿದೆ ಎನ್ನಬಹುದು.
ಶಿಗ್ಗಾವಿಯಲ್ಲಿ ಮತ್ತೊಬ್ಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಸೋಲಾಗಿದ್ದು, ಕಾಂಗ್ರೆಸ್ ನ ಪಠಾಣ್ ಖಾನ್ ಗೆಲುವು ಸಾಧಿಸಿದ್ದಾರೆ. ಸಂಡೂರಿನಲ್ಲಿ ತುಕರಾಂ ಪತ್ನಿಯ ಗೆಲುವಿನೊಂದಿಗೆ ಕಾಂಗ್ರೆಸ್ ಭರ್ಜರಿ ಫಸಲು ಪಡೆದಿದೆ.


