ತುಮಕೂರು: ಮನೆಯ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಅಂಗಡಿ ಮಂಜಣ್ಣ ಎಂಬುವವರ ಮೂರು ವರ್ಷದ ಪುತ್ರ ನೀರಿನ ತೊಟ್ಟಿಯಲ್ಲಿ ಬಿದ್ದಿದ್ದಾನೆ. ಆಟವಾಡುವ ಸಂದರ್ಭದಲ್ಲಿ ತೊಟ್ಟಿಯೊಳಗೆ ಬಿದ್ದಿದ್ದು, ಇದನ್ನು ಯಾರೂ ಗಮನಿಸಿಲ್ಲ. ಹೀಗಾಗಿ, ಮಗು ಪ್ರಾಣ ಕಳೆದುಕೊಂಡಿದೆ ಎನ್ನಲಾಗುತ್ತಿದೆ.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.